ಗದಗ:ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೋವಿಡ್-19 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುವುದು ನಮಗೆಲ್ಲ ಒಂದು ಹಂತದಲ್ಲಿ ನೆಮ್ಮದಿ ನೀಡಿದೆ. ಆದರೆ ಕೋವಿಡ್-19 ಸೋಂಕು ತಡೆ ಕುರಿತ ಜಿಲ್ಲೆಯ ಸಾರ್ವಜನಿಕರು, ಯುವ ಜನರು ಮತ್ತು ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿಯಿಂದ ಜೀವನವನ್ನು ನಡೆಸಬೇಕಾದ ಕುರಿತು ರಾಜ್ಯದ ಗಣಿ ಭೂವಿಜ್ಞಾನ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಮನವಿ ಮಾಡಿದ್ದಾರೆ.
ಕೊರೊನಾ ಬಗ್ಗೆ ಜಾಗ್ರತೆಯಿಂದ ಇರಿ, ನುಣುಚಿಕೊಳ್ಳಬೇಡಿ: ಸಚಿವ ಸಿ.ಸಿ.ಪಾಟೀಲ - Minister CC Patil news
ಕೋವಿಡ್-19 ಸೋಂಕಿನ ತಡೆ ಮತ್ತು ನಿಯಂತ್ರಣ ಕುರಿತು ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ, ಅನವಶ್ಯಕ ಓಡಾಟ, ಪ್ರಯಾಣ ನಿಲ್ಲಿಸುವ, ಮುಖಕ್ಕೆ ಮಾಸ್ಕ್, ಸ್ಯಾನಿಟೈಸರ್ ಉಪಯೋಗ, ಆಗಾಗ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳುವುದು ನಮ್ಮ ನಿತ್ಯದ ಅಭ್ಯಾಸವಾಗಬೇಕು ಎಂದು ಸಿ.ಸಿ.ಪಾಟೀಲ ಮನವಿ ಮಾಡಿದ್ದಾರೆ.
ಕೋವಿಡ್-19 ಸೋಂಕಿನ ತಡೆ ಮತ್ತು ನಿಯಂತ್ರಣ ಕುರಿತು ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ, ಅನವಶ್ಯಕ ಓಡಾಟ, ಪ್ರಯಾಣ ನಿಲ್ಲಿಸುವ, ಮುಖಕ್ಕೆ ಮಾಸ್ಕ್, ಸ್ಯಾನಿಟೈಸರ್ ಉಪಯೋಗ, ಆಗಾಗ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳುವುದು ನಮ್ಮ ನಿತ್ಯದ ಅಭ್ಯಾಸವಾಗಬೇಕು. ಎಲ್ಲರೂ ಈ ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಪಾಲಿಸಿದಲ್ಲಿ ಮಾತ್ರ ಕೋವಿಡ್-19 ಸೋಂಕನ್ನು ಯಶಸ್ವಿಯಾಗಿ ತಡೆಗಟ್ಟಬಹುದು. ಕೋವಿಡ್-19 ಈಗ ದೇಶದ, ಸರ್ಕಾರದ ಸಮಸ್ಯೆ ಮಾತ್ರವಲ್ಲ ಪ್ರತಿ ವ್ಯಕ್ತಿ, ಕುಟುಂಬ, ಸಮಾಜಗಳ ಅಳಿವು ಉಳಿವಿನ ಪ್ರಶ್ನೆ ಎಂಬುದನ್ನು ನಾವು ಅರಿತುಕೊಂಡು ತಪ್ಪದೇ ವೈಯಕ್ತಿಕ, ಸಾಮಾಜಿಕ ಅಂತರದಂತಹ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲು ಸಚಿವ ಸಿ.ಸಿ.ಪಾಟೀಲ ತಿಳಿಸಿದ್ದಾರೆ.