ಗದಗ :ಡಿ. ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ರಾಜ್ಯದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ. ಪಾಟೀಲ್ ಕಿಡಿ ಕಾರಿದ್ರು.
ಕನಕಪುರದ ಏಸು ಪ್ರತಿಮೆ ವಿಚಾರವಾಗಿ ಮಾತನಾಡಿದ ಅವರು, ಕ್ರಿಶ್ಚಿಯನ್ ಸಮುದಾಯ ಏಸು ಪ್ರತಿಮೆ ಮಾಡುತ್ತಿಲ್ಲ. ಪ್ರತಿಮೆ ನಿರ್ಮಾಣ ಮಾಡಲು ಡಿ. ಕೆ. ಶಿವಕುಮಾರ್ ಅವರೇ ಮುಂದಾಗಿದ್ದಾರೆ. ಪ್ರತಿಮೆ ವಿಷಯ ತಿರುಗಿ ಅವರಿಗೆ ಪೆಟ್ಟು ಕೊಡುತ್ತದೆ ವಿನಃ ಯಾವುದೇ ಲಾಭವಾಗುವುದಿಲ್ಲ ಎಂದರು.
ಕಾಂಗ್ರೆಸ್ ಪಕ್ಷ ಐದು ವರ್ಷ ಆಡಳಿತ ನಡೆಸಿದಾಗ, ಡಿ. ಕೆ. ಶಿವಕುಮಾರ್ ಅನಭಿಷಕ್ತ ದೊರೆಯಂತೆ ಇದ್ದರು. ಬಳಿಕ ದೋಸ್ತಿ ಸರ್ಕಾರದ 14 ತಿಂಗಳ ಅವಧಿಯಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರ ಎಡಗೈ ಹಾಗೂ ಬಲಗೈ ಬಂಟನಂತೆ ಇದ್ದರು. ಆ ಸಮಯದಲ್ಲಿ ಇಲ್ಲದ ವಿಚಾರವನ್ನು ಈಗೇಕೆ ಎತ್ತಿಕೊಂಡಿದ್ದಾರೆ ಎಂದು ಪ್ರಶ್ನೆ ಮಾಡಿದ್ರು. ಒಟ್ಟಾರೆ ಇದು ಕಾನೂನು ಸುವ್ಯವಸ್ಥೆ ಹಾಗೂ ನಮ್ಮ ಸರ್ಕಾರವನ್ನು ಒತ್ತಡದಲ್ಲಿ ಸಿಲುಕಿಸುವ ಪ್ರಯತ್ನವಾಗಿಗೆ ಎಂದರು. ಬಿಜೆಪಿಯವರು ಎಲ್ಲಾ ಜಾತಿ ಸಮುದಾಯದೊಂದಿಗೆ ಸಾಮರಸ್ಯದ ಭಾವನೆಯಿಂದ ಹೋಗುತ್ತಿದ್ದಾರೆ. ಯಾವುದೇ ಕೋಮಿನ ವಿರೋಧಿ ಬಿಜೆಪಿ ಪಕ್ಷವಲ್ಲ ಎಂದು ಹೇಳಿದರು.