ಕರ್ನಾಟಕ

karnataka

ETV Bharat / state

ಪಾದರಾಯನಪುರ ಪ್ರಕರಣ: ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಸಚಿವ ಸಿ ಸಿ ಪಾಟೀಲ್

ನಿನ್ನೆ ಪಾದರಾಯನಪುರದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ಸಿ ಸಿ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ. ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಅವರು ಹೇಳಿದ್ದಾರೆ.

Minister CC Patil
ಸಚಿವ ಸಿಸಿ ಪಾಟೀಲ್

By

Published : Apr 20, 2020, 1:57 PM IST

Updated : Apr 20, 2020, 2:05 PM IST

ಗದಗ:ಬೆಂಗಳೂರಿನ ಪಾದರಾಯನಪುರದಲ್ಲಿ ಪೊಲೀಸ್​​ ಸಿಬ್ಬಂದಿ, ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಪ್ರಕರಣದ ಕುರಿತು ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ಸಿ ಸಿ ಪಾಟೀಲ್​ ಕಿಡಿಕಾರಿದ್ದಾರೆ.

ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ಸಿ ಸಿ ಪಾಟೀಲ್

ಈ ಕುರಿತಂತೆ ಇಂದು ಮಾಧ್ಯಮದವರೊಂದಿಗೆ ಮಾತನಾಡಿರುವ ಸಚಿವರು, ಕಳೆದ 27 ದಿನಗಳಿಂದ ಕೊರೊನಾ ಹರಡದಂತೆ, ಜನರಿಗೆ ಜಾಗೃತಿ ಮೂಡಿಸುವ ದೃಷ್ಟಿಯಿಂದ ಪೊಲೀಸರು, ವೈದ್ಯಕೀಯ ಸಿಬ್ಬಂದಿ ತಮ್ಮ ಜೀವನ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ನಡುವೆ ನಿನ್ನೆ ಜನರ ಹಿತ ದೃಷ್ಟಿಯಿಂದ ಕ್ವಾರಂಟೈನ್​​ಗೆ ಶಂಕಿತರನ್ನು ಕರೆದೊಯ್ಯಲು ಹೋಗಿದ್ದ ಸಿಬ್ಬಂದಿಗಳ ಮೇಲೆ ಕಿಡಿಗೇಡಿಗಳು ಹಲ್ಲೆ ಮಾಡಿರುವುದು ಖಂಡನೀಯ. ಹಲ್ಲೆ ಮಾಡಿದವರು ಮಾನವರಾಗಿರಲು ಯೋಗ್ಯರಲ್ಲ. ಅಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

ಜಿಲ್ಲೆ ಸೇರಿದಂತೆ ರಾಜ್ಯ, ದೇಶದಲ್ಲಿ ಹಗಲಿರುಳು ಜೀವದ ಹಂಗು ತೊರೆದು ಕೋವಿಡ್-19 ನಿಯಂತ್ರಣಕ್ಕೆ ಜನರ ಜೀವ ಸಂರಕ್ಷಣೆ ಯುದ್ಧದಲ್ಲಿ ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್, ಆರೋಗ್ಯ ಹಾಗೂ ಇತರ ಇಲಾಖೆಗಳ ಅಧಿಕಾರಿ ಸಿಬ್ಬಂದಿ, ಸೇನಾನಿಗಳಿಗೆ ಸಚಿವರು ಅಭಿನಂದನೆ ಸಲ್ಲಿಸಿದರು.

Last Updated : Apr 20, 2020, 2:05 PM IST

ABOUT THE AUTHOR

...view details