ಗದಗ:ಕಂಟೇನ್ಮೆಂಟ್ ಪ್ರದೇಶದವಾದ ಕೃಷ್ಣಾಪುರದಲ್ಲಿ ಜಿಲ್ಲಾಡಳಿತ ಹಾಲು ಹಾಗೂ ತರಕಾರಿ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿದೆ.
ಹಾಲು, ತರಕಾರಿ ಮಾರಾಟಕ್ಕೆ ವ್ಯವಸ್ಥೆ ಜಿಲ್ಲೆಯ ಕೃಷ್ಣಾಪುರದಲ್ಲಿ 25 ವರ್ಷದ ಗರ್ಭಿಣಿಗೆ ಕೊರೊನಾ ದೃಢಪಟ್ಟ ಹಿನ್ನೆಲೆ, ಕೃಷ್ಣಾಪುರ ಗ್ರಾಮವನ್ನು ಕಂಟೇನ್ಮೆಂಟ್ ಪ್ರದೇಶ ಎಂದು ಘೋಷಿಸಲಾಗಿತ್ತು. ಈ ಹಿನ್ನೆಲೆ ಗದಗ ಜಿಲ್ಲೆಯ ರೋಣ ತಾಲೂಕಿನ ಕೃಷ್ಣಾಪುರದ ಗ್ರಾಮದಲ್ಲಿ ನಾಲ್ಕು ದಿನಗಳಲ್ಲಿ ಅಂಗಡಿಗಳು ಮುಚ್ಚಿದ್ದವು.
ಕೃಷ್ಣಾಪುರ ಗ್ರಾಮ ಸೀಲ್ ಡೌನ್: ಹಾಲಿಗಾಗಿ ಮಕ್ಕಳ ಗೋಳಾಟ
ಈ ಹಿನ್ನೆಲೆ ಅಗತ್ಯ ವಸ್ತುಗಳಿಗಾಗಿ ಜನರು ಪರದಾಟ ನಡೆಸಿದ್ದರು. ಹಾಲಿಲ್ಲದೇ ಮಕ್ಕಳು ಗೋಳಾಡುತ್ತಿವೆ ಅಂತ ತಾಯಂದಿರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಕುರಿತು ಈಟಿವಿ ಭಾರತ ''ಕೃಷ್ಣಾಪುರ ಗ್ರಾಮ ಸೀಲ್ ಡೌನ್: ಹಾಲಿಗಾಗಿ ಮಕ್ಕಳ ಗೋಳಾಟ'' ಎಂಬ ಶೀರ್ಷಿಕೆಯಡಿನಿನ್ನೆ ವರದಿ ಪ್ರಸಾರ ಮಾಡಿತ್ತು.ಈಗ ವರದಿಯಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತದಿಂದ ದಿನಸಿ ವ್ಯವಸ್ಥೆ ಮಾಡಲಾಗಿದೆ.
ಇಂದು ಬೆಳ್ಳಂಬೆಳಗ್ಗೆಯೇ ತರಕಾರಿ, ಹಾಲು ಮಾರಾಟಕ್ಕೆ ವ್ಯವಸ್ಥೆ ಮಾಡಿದ ಹಿನ್ನೆಲೆ ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ತರಕಾರಿ, ಹಾಲು ಖರೀದಿಸಿದರು.