ಕರ್ನಾಟಕ

karnataka

ETV Bharat / state

ಗದಗ: ಕೊರೊನಾ ವಾರ್ಡ್​ ಪಕ್ಕದಲ್ಲೇ ವೈದ್ಯಕೀಯ ವಿದ್ಯಾರ್ಥಿಗಳಿಂದ ನಡುರಾತ್ರಿ ಬರ್ತ್​ಡೇ ಪಾರ್ಟಿ - Midnight Birthday Party

ಗದಗದ ಜಿಮ್ಸ್​ ಆಸ್ಪತ್ರೆಯ ಕೊರೊನಾ ವಾರ್ಡ್​ ಪಕ್ಕದಲ್ಲಿರುವ ಹಾಸ್ಟೆಲ್​ನಲ್ಲಿ 9 ಮಂದಿ ವೈದ್ಯಕೀಯ ವಿದ್ಯಾರ್ಥಿಗಳು ಏಪ್ರಿಲ್ 21 ಹಾಗೂ 22ರ ನಡುರಾತ್ರಿ ಬರ್ತ್​​ಡೇ ಪಾರ್ಟಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Midnight Birthday Party from Gadag Medical Students ..!
ಗದಗದ ವೈದ್ಯಕೀಯ ವಿದ್ಯಾರ್ಥಿಗಳಿಂದ ನಡುರಾತ್ರಿ ಬರ್ತ್​ಡೇ ಪಾರ್ಟಿ..!

By

Published : Apr 30, 2020, 9:06 AM IST

Updated : Apr 30, 2020, 1:35 PM IST

ಗದಗ:ಗದಗದ ಜಿಮ್ಸ್​ ಆಸ್ಪತ್ರೆಯ ಕೊರೊನಾ ವಾರ್ಡ್​ನ ಪಕ್ಕದಲ್ಲಿರುವ ಹಾಸ್ಟೆಲ್​ನಲ್ಲಿ 9 ಮಂದಿ ವೈದ್ಯಕೀಯ ವಿಧ್ಯಾರ್ಥಿಗಳು ನಡುರಾತ್ರಿ ಬರ್ತಡೇ ಪಾರ್ಟಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸಿಸಿಟಿವಿ ವಿಡಿಯೋ

ವೈದ್ಯಕೀಯ ವಿಧ್ಯಾರ್ಥಿಗಳು ನಡುರಾತ್ರಿ ಡಿಜೆ ಹಾಕಿ ಕುಣಿದು ಕುಪ್ಪಳಿಸಿದ್ದಾರೆ. ಹಾಸ್ಟೆಲ್​ ವಾರ್ಡನ್ ಡಾ. ಜಿ.ಎಂ ರಾಜು ಅವರಿಗೆ ಮಾಹಿತಿ ತಿಳಿದು ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ್ದಲ್ಲದೆ, ಪೊಲೀಸರಿಗೂ ಕರೆ ಮಾಡಿ ಎಚ್ಚರಿಕೆ ಕೊಡಿಸಿದ್ದಾರೆ ಎಂಬ ಮಾಹಿತಿಯಿದೆ.

ಏಪ್ರಿಲ್ 21 ಹಾಗೂ 22ರ ಮಧ್ಯರಾತ್ರಿ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.

Last Updated : Apr 30, 2020, 1:35 PM IST

ABOUT THE AUTHOR

...view details