ಗದಗ: ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆ ಮಾರುಕಟ್ಟೆ ಸೀಲ್ಡೌನ್ ಮಾಡಲು ಮುಂದಾಗಿದ್ದಕ್ಕೆ ತಹಶೀಲ್ದಾರ್ ಜೊತೆ ಸ್ಥಳೀಯರು ಮಾತಿನ ಚಕಮಕಿ ನಡೆಸಿದ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ.
ಕಂಟೈನ್ಮೆಂಟ್ ಝೋನ್ನಲ್ಲಿ ವ್ಯಾಪಾರಕ್ಕೆ ಅವಕಾಶ ಕೊಡಿ: ತಹಶೀಲ್ದಾರ್ ಜೊತೆ ವ್ಯಾಪಾರಿಗಳ ವಾಗ್ವಾದ - Merchants' argument with Lakshmeshwara Tahsildar
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆ ಮಾರುಕಟ್ಟೆ ಸೀಲ್ಡೌನ್ ಮಾಡಲು ಮುಂದಾಗಿದ್ದಕ್ಕೆ ತಹಶೀಲ್ದಾರ್ ಜೊತೆ ಸ್ಥಳೀಯರು ಮಾತಿನ ಚಕಮಕಿ ನಡೆಸಿದ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ.
ತಹಶಿಲ್ದಾರ್ ಜತೆ ವ್ಯಾಪಾರಿಗಳ ವಾಗ್ವಾದ
ಪಟ್ಟಣದ ಮಾರುಕಟ್ಟೆ ಪ್ರದೇಶದ ಮೂರು ಜನರಿಗೆ ಕೊರೊನಾ ಸೋಂಕು ತಗುಲಿದೆ. ಹೀಗಾಗಿ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿತ್ತು.
ಆದರೆ ಪಾಸಿಟಿವ್ ಬಂದ ಮಾಲೀಕರ ಅಂಗಡಿ ಕ್ಲೋಸ್ ಮಾಡಿ ಉಳಿದ ಅಂಗಡಿ ತೆರೆಯಲು ಅವಕಾಶ ನೀಡುವಂತೆ ಲಕ್ಷ್ಮೇಶ್ವರ ತಹಶಿಲ್ದಾರ್ ಭ್ರಮರಾಂಬ್ ಗುಬ್ಬಿಶೆಟ್ಟರ್ ಜತೆ ವಾಗ್ವಾದಕ್ಕೆ ಇಳಿದಿದ್ದಾರೆ. ಇದಕ್ಕೆ ಸೊಪ್ಪು ಹಾಕದ ತಹಶಿಲ್ದಾರ್ ಎಲ್ಲ ಅಂಗಡಿ ಬಂದ್ ಮಾಡಿಸಿ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಿದ್ದಾರೆ.
Last Updated : Jul 18, 2020, 7:22 PM IST