ಕರ್ನಾಟಕ

karnataka

ETV Bharat / state

ಪ್ರೀತಿಸಿ ಮದುವೆಯಾದ ಮಗಳಿಗೆ ಕುಟುಂಬದಿಂದ ಬೆದರಿಕೆ: ರಕ್ಷಣೆಗೆ SP ಮೊರೆ ಹೋದ ಜೋಡಿ - ಪರಸ್ಪರ ಪ್ರೀತಿಸಿ ಮದುವೆ

ಪರಸ್ಪರ ಪ್ರೀತಿಸಿ ಮದುವೆಯಾಗಿರುವ ಜೋಡಿಗೆ ಪಿಎಸ್​ಐ ತಾಯಿ ವಿಲನ್​ ಆಗಿದ್ದು, ತಮಗೆ ರಕ್ಷಣೆ ನೀಡುವಂತೆ ಎಸ್​ಪಿ ಮೊರೆ ಹೋಗಿದ್ದಾರೆ.

Marriage couple
Marriage couple

By

Published : Jul 14, 2021, 1:29 AM IST

Updated : Jul 15, 2021, 4:16 PM IST

ಗದಗ​:ಕಳೆದ ಏಳು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಜೋಡಿವೊಂದು ಮದುವೆ ಮಾಡಿಕೊಂಡಿದ್ದು, ತಮಗೆ ರಕ್ಷಣೆ ನೀಡುವಂತೆ ಎಸ್​ಪಿ ಮೊರೆ ಹೋಗಿದ್ದಾರೆ. ಯುವತಿಯ ತಾಯಿ ಪಿಎಸ್ಐ, ತಂದೆ ಹವಾಲ್ದಾರ್​​ ಆಗಿದ್ದು, ಇವರಿಂದ ತಮಗೆ ತೊಂದರೆ ಆಗಬಹುದೆಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದಾರೆ.

ರಕ್ಷಣೆಗಾಗಿ ಎಸ್​ಪಿ ಮೊರೆ ಹೋದ ಜೋಡಿ

ರಾಜೀವ್ ಗಾಂಧಿ ಪೊಲೀಸ್ ಠಾಣೆಯ ಸಬ್​ ಇನ್ಸ್​​ಪೆಕ್ಟರ್​ ರೇಣುಕಾ ಮುಂಡೆವಾಡಗಿ ಪ್ರೀತಿ ಮಾಡಿ ಮದುವೆಯಾಗಿರುವ ತನ್ನ ಏಕೈಕ ಮಗಳಿಗೆ ಜೀವ ಬೆದರಿಕೆ ಹಾಕಿದ್ದಾರಂತೆ. ಹೀಗಂತ ಮಗಳು ಮೇಘಾ ದೂರು ನೀಡಿದ್ದಾಳೆ. ಇವರ ತಾಯಿ ರೇಣುಕಾ ಪಿಎಸ್​ಐ ಹಾಗೂ ತಂದೆ ರಮೇಶ್​ ಹವಾಲ್ದಾರ್​​ ಆಗಿ ಸೇವೆ ಸಲ್ಲಿಸುತ್ತಿದ್ದು, ತಮಗೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿದ್ದಾಳೆ. ಹೀಗಾಗಿ ಜೀವ ರಕ್ಷಣೆ ನೀಡುವಂತೆ ಎಸ್​ಪಿ ಮೊರೆ ಹೋಗಿದ್ದಾರೆ.

ಮೇಘಾ ಕಳೆದ ಆರು ತಿಂಗಳ ಹಿಂದೆ ಮನೆಬಿಟ್ಟು ಹೋಗಿ ಕೀರ್ತನಾಥ ಎಂಬ ಯುವಕನ ಜೊತೆ ಸಬ್​ ರಿಜಿಸ್ಟರ್​ ಮೂಲಕ ಮದುವೆಯಾಗಿದ್ದಾರೆ. ಆದರೆ ಪಿಎಸ್​ಐ ಆಗಿರುವ ತಾಯಿ ಮತ್ತು ಅಗ್ನಿಶಾಮಕ ದಳದಲ್ಲಿ ಹವಾಲ್ದಾರ್ ಆಗಿರುವ ತಂದೆ ನಮ್ಮನ್ನ ಕೊಲ್ಲುತ್ತೇವೆ ಅಂತ ಜೀವ ಬೆದರಿಕೆ ಹಾಕಿದ್ದಾರೆ. ಹೀಗಾಗಿ ನಮಗೆ ರಕ್ಷಣೆಬೇಕು ಎಂದು ಗದಗ ಎಸ್​ಪಿ ಎನ್.​ ಯತೀಶ್​ ಅವರ ಮೊರೆ ಹೋಗಿದ್ದಾರೆ.

ರಕ್ಷಣೆ ನೀಡುವಂತೆ ಎಸ್​ಪಿಗೆ ಮೊರೆ

ಈ ಜೋಡಿ ಕಳೆದ 7 ವರ್ಷಗಳಿಂದ ಪರಸ್ಪರ ಪ್ರೀತಿ ಮಾಡಿದ್ದರಂತೆ.ಇಬ್ಬರ ವಿಷಯ ಎರಡು ಮನೆಯವರಿಗೆ ತಿಳಿದಿತ್ತು. ಆದರೆ ಮದುವೆಯಾಗಲು ವಿರೋಧ ವ್ಯಕ್ತಪಡಿಸಿದ್ದರು. ಬೇರೆ ಬೇರೆ ಜಾತಿಯವರಾಗಿರುವ ಕಾರಣ ಈ ವಿರೋಧ ವ್ಯಕ್ತವಾಗಿದೆ. ಇದರ ಮಧ್ಯೆ ಲಾಕ್​ಡೌನ್​ ಸಂದರ್ಭದಲ್ಲಿ ಯುವತಿ ಮೇಘಾಳಿಗೆ ಪೋಷಕರು ಬೇರೆ ಕಡೆ ಸಂಬಂಧ ಕೂರಿಸಲು ಸಜ್ಜಾಗಿದ್ದರಂತೆ. ಆದರೆ ಇದಕ್ಕೆ ಮೇಘಾ ವಿರೋಧ ವ್ಯಕ್ತಪಡಿಸಿ,ಮನೆ ಬಿಟ್ಟು ಹೋಗಿದ್ದಳು.

ಇದನ್ನೂ ಓದಿರಿ: ಕನ್ನಡದಲ್ಲಿ ಬ್ಯಾಂಕಿಂಗ್​ ಪರೀಕ್ಷೆ... ನಿರ್ಮಲಾ ಸೀತಾರಾಮನ್​ ಭೇಟಿ ಮಾಡಿದ ಜೋಶಿ

ಡಿಸೆಂಬರ್​ 2, 2020 ರಂದು ಮದುವೆ ಮಾಡಿಕೊಂಡಿದ್ದ ಈ ಜೋಡಿ ಬಳಿಕ ಮುಂಡರಗಿಯ ಸಬ್​ ರಿಜಿಸ್ಟರ್​ ಕಚೇರಿಯಲ್ಲಿ ಜನವರಿ 5ರಂದು ರಿಜಿಸ್ಟರ್​ ಮಾಡಿಸಿದ್ದಾರೆ. ಇದಾದ ಬಳಿಕ ಗೋವಾದಲ್ಲಿ ತಂಗಿದ್ದರು. ಈ ವೇಳೆ ಪದೇ ಪದೇ ಬೆದರಿಕೆ ಕರೆಗೆಳು ಬಂದಿವೆ. ಹೀಗಾಗಿ ಮೊಬೈಲ್​ ಸ್ವಿಚ್​ ಆಫ್​​ ಮಾಡಿದ್ದರು. ಆದರೆ ಇದೀಗ ಊರಿಗೆ ಬರಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ. ಇಲ್ಲಿ ಎಲ್ಲರೂ ಬೆದರಿಕೆ ಹಾಕ್ತಿದ್ದಾರೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಬೆಳಗಾವಿಗೆ ಹೋಗಿ ಐಜಿಯವರಲ್ಲಿ ರಕ್ಷಣೆ ಕೋರಿ ಮನವಿ ಮಾಡಿದ್ದರು. ಇದೀಗ ಗದಗ ಎಸ್​ಪಿ ರಕ್ಷಣೆ ಕೋರಿದ್ದಾರೆ. ಇವರ ಮನವಿಗೆ ಸ್ಪಂದಿಸಿರುವ ಅವರು ರಕ್ಷಣೆ ನೀಡುವುದಾಗಿ ಭರವಸೆ ನೀಡಿದ್ದಾರೆ.

Last Updated : Jul 15, 2021, 4:16 PM IST

ABOUT THE AUTHOR

...view details