ಕರ್ನಾಟಕ

karnataka

ETV Bharat / state

ನಾಳೆಯಿಂದ ಮಂದಿರ, ಮಸೀದಿ ಓಪನ್.. ಗದಗದಲ್ಲಿ ಆಡಳಿತ ಮಂಡಳಿಯಿಂದ ಪೂರ್ವ ತಯಾರಿ.. - Historical Trikuteshwara Temple

ದೇವಾಲಯ ಹಾಗೂ ಮಸೀದಿ ಎರಡೂ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವುದು, ಸ್ಯಾನಿಟೈಸರ್ ಬಳಕೆ, ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಆದರೆ, ದೇವಸ್ಥಾನದಲ್ಲಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಇರುವುದಿಲ್ಲ. ಅಲ್ಲದೇ ಹೂವು ಹಣ್ಣು ಕಾಯಿ ತರುವಂತಿಲ್ಲಾ ಎಂದು ಸ್ಪಷ್ಟಪಡಿಸಲಾಗಿದೆ.

Mandir, Mosque Open
ನಾಳೆಯಿಂದ ಮಂದಿರ, ಮಸೀದಿ ಓಪನ್

By

Published : Jun 7, 2020, 3:06 PM IST

ಗದಗ :ಲಾಕ್​ಡೌನ್​​ ಸಡಿಲಿಕೆಯಾದ ಹಿನ್ನೆಲೆ ರಾಜ್ಯಾದ್ಯಂತ ನಾಳೆಯಿಂದ ದೇವಾಲಯ,ಮಸೀದಿ,ಚರ್ಚ್ ಓಪನ್ ಆಗಲಿದ್ದು, ಪರಿಣಾಮ ನಗರದ ಐತಿಹಾಸಿಕ ತ್ರಿಕೂಟೇಶ್ವರ ದೇವಸ್ಥಾನ ಹಾಗೂ ಜುಮ್ಮಾ ಮಸೀದಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಾರ್ಥನೆ ಹಾಗೂ ನಮಾಜ್ ಮಾಡಲು ಪೂರ್ವ ಸಿದ್ಧತೆ ಆರಂಭಿಸಲಾಗಿದೆ.

ನಾಳೆಯಿಂದ ಮಂದಿರ, ಮಸೀದಿ ಓಪನ್..

ದೇವಾಲಯ ಹಾಗೂ ಮಸೀದಿ ಎರಡೂ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವುದು, ಸ್ಯಾನಿಟೈಸರ್ ಬಳಕೆ, ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಆದರೆ, ದೇವಸ್ಥಾನದಲ್ಲಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಇರುವುದಿಲ್ಲ. ಅಲ್ಲದೇ ಹೂವು, ಹಣ್ಣು, ಕಾಯಿ ತರುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಅಲ್ಲದೇ ಮಸೀದಿಯಲ್ಲಿ ನಮಾಜ್ ಮಾಡಲು ಬರುವವರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಎರಡು ಅಡಿಗೊಂದರಂತೆ ಬಾಕ್ಸ್​​ಗಳ ಮಾರ್ಕ್ ಹಾಕಲಾಗಿದೆ. ಒಂದು ಬಾರಿ ಕೇವಲ ₹50 ಜನರಿಗೆ ಮಾತ್ರ ನಮಾಜ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ 10 ವರ್ಷದ ಒಳಗಿನ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಅವಕಾಶವನ್ನು ನಿಷೇಧಿಸಲಾಗಿದೆ. ಎಲ್ಲಾ ಧರ್ಮೀಯರ ಪ್ರಾರ್ಥನಾ ಸ್ಥಳಗಳಲ್ಲೂ ಸರ್ಕಾರದ ನಿಯಮಗಳನ್ನು ಪಾಲಿಸುವುದು ಕಡ್ಡಾಯಗೊಳಿಸಲಾಗಿದೆ.

ABOUT THE AUTHOR

...view details