ಕರ್ನಾಟಕ

karnataka

ETV Bharat / state

ವಯಸ್ಸು ತಡೆಯಲಾರದ ಆತುರಗೇಡಿ ಮದುವೆ ಮಾಡ್ತಿಲ್ವೆಂದು ಅಪ್ಪನಿಗೆ ಕೊಡಲಿ ಬೀಸಿದ್ದ.. ತಂದೆನೂ ಮನುಷ್ಯ ಅಲ್ವೇನ್ರೀ.. - ತಂದೆ ಮೇಲೆ ಮಗನಿಂದ ಹಲ್ಲೆ

2020 ಮೇ 24 ರಂದು ರೊಚ್ಚಿಗೆದ್ದು ಬಂದಿದ್ದ, ರವಿ ಸುಣಗದ ಅವರ ತಂದೆ ನಿಂಗಪ್ಪ ಅದರೊಂದಿಗೆ ಜಗಳ ಆರಂಭ ಮಾಡಿದ್ದ. ನನ್ನ ಮದುವೆ ಮಾಡು ಇಲ್ಲವಾದರೆ ನಿನ್ನ ಜೀವಂತ ಉಳಿಸುವುದಿಲ್ಲ ಎಂದು ಜಗಳ ಆರಂಭ ಮಾಡಿದ್ದ..

prison
ಕೋರ್ಟ್​ನಿಂದ ತಕ್ಕ ಶಿಕ್ಷೆ

By

Published : Sep 11, 2021, 9:24 PM IST

ಗದಗ: ತಂದೆ-ತಾಯಿ ಮಕ್ಕಳ ಒಳಿತಿಗೆ ತಮ್ಮ ಇಡೀ ಬದುಕನ್ನೇ ಮುಡುಪಾಗಿ ಇಟ್ಟಿರುತ್ತಾರೆ. ಅವರ ಬೇಕು, ಬೇಡಿಕೆಗಳನ್ನು ಈಡೇರಿಸಲು ಹಗಲಿರುಳು ಶತಪ್ರಯತ್ನ ಮಾಡ್ತಿರ್ತಾರೆ. ಆದರೆ, ಇಲ್ಲೊಬ್ಬ ಭೂಪ ಮದುವೆ ಮಾಡಿಸು ಅಂತಾ ತನ್ನಪ್ಪನಿಗೆ ದುಂಬಾಲು ಬಿದ್ದಿದ್ದ.

ಅದರಂತೆ ಮಗನಿಗೆ ಮದುವೆ ಮಾಡಿಸಬೇಕು ಅಂತಾ ಅಪ್ಪ ಕನ್ಯೆ ನೋಡ್ತಿದ್ರು. ಆದರೆ, ಸ್ವಲ್ಪ ತಡವಾಗಿರಬೇಕು ಅಷ್ಟೇ.. ಮಗನ ಮದುವೆ ಆತುರ ಅಪ್ಪನನ್ನೇ ಮುಗಿಸುವ ಹಂತಕ್ಕೆ ತಲುಪಿತ್ತು. ಮದುವೆ ಮಾಡಿಸ್ತಿಲ್ಲ ಅಂತಾ ಊಟಕ್ಕೆ ಕೂತ ಅಪ್ಪನ ಕುತ್ತಿಗೆಗೆ ಕೊಡಲಿ ಏಟು ಕೊಟ್ಟಿದ್ದ ಕಿರಾತಕ ಮಗ.

ತಂದೆಯ ಕೊಲೆಗೆ ಯತ್ನಿಸಿದ ಮಗನಿಗೆ ಶಿಕ್ಷೆ..

ಗದಗ ಜಿಲ್ಲೆ ರೋಣ ತಾಲೂಕಿನ ಬೆಳವಣಕಿ ಗ್ರಾಮದ ನಿವಾಸಿ ರವಿ ಸುಣಗದ ಎಂಬಾತ ತನ್ನ ಮದುವೆ ಮಾಡುವಂತೆ ತನ್ನ ತಂದೆ ನಿಂಗಪ್ಪ ಸುಣಗದ ಅವರಿಗೆ ನಿತ್ಯ ಕಿರುಕುಳ ನೀಡ್ತಿದ್ದ. ನನ್ನ ಜೊತೆಗೆ ಇರುವ ಸ್ನೇಹಿತರ ಮದುವೆಯಾಗಿದೆ. ನೀನು ನನ್ನ ಮದುವೆ ಮಾಡು ಎಂದು ನಿತ್ಯ ಮನೆಯಲ್ಲಿ ಜಗಳ ತೆಗೆಯುತ್ತಿದ್ದ.

2020 ಮೇ 24 ರಂದು ರೊಚ್ಚಿಗೆದ್ದು ಬಂದಿದ್ದ, ರವಿ ಸುಣಗದ ಅವರ ತಂದೆ ನಿಂಗಪ್ಪ ಅದರೊಂದಿಗೆ ಜಗಳ ಆರಂಭ ಮಾಡಿದ್ದ. ನನ್ನ ಮದುವೆ ಮಾಡು ಇಲ್ಲವಾದರೆ ನಿನ್ನ ಜೀವಂತ ಉಳಿಸುವುದಿಲ್ಲ ಎಂದು ಜಗಳ ಆರಂಭ ಮಾಡಿದ್ದ.

ಒಂದು ದಿನ ಮನೆಯಲ್ಲಿ ತಂದೆ ನಿಂಗಪ್ಪ ಊಟಕ್ಕೆ ಕೂತಾಗ ಮತ್ತೆ ಕ್ಯಾತೆ ತೆಗೆದಿದ್ದ. ಜಗಳ ವಿಕೋಪಕ್ಕೆ ಹೋಗಿ ಮನೆಯಲ್ಲಿದ್ದ ಕೊಡಲಿಯಿಂದ ರವಿ ತಂದೆಯ ಹಣೆಗೆ, ತಲೆ, ಕುತ್ತಿಗೆ ಮೇಲೆ ಮಾರಣಾಂತಿಕವಾಗಿ ಹಲ್ಲೆ‌ ಮಾಡಿದ್ದ. ಆ ರವಿ ಅವರ ತಂದೆ ನಿಂಗಪ್ಪ ರೋಣ ಪೊಲೀಸ್​ ಠಾಣೆಯಲ್ಲಿ ಮಗನ ವಿರುದ್ಧ ದೂರು ದಾಖಲು ಮಾಡಿದ್ದರು.

ಅಷ್ಟೇ ಅಲ್ಲ, ನಿಂಗಪ್ಪ ಹುಷಾರಾಗಿ ಕೋರ್ಟ್​​ಗೆ ಬಂದು ತಮ್ಮ ಮಗನ ಕೃತ್ಯದ ಕುರಿತು ಸಾಕ್ಷಿ ಹೇಳಿದ್ದರು. ಈಗ ಗದಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ರವಿಗೆ ಎರಡು ವರ್ಷ ಕಠಿಣ ಶಿಕ್ಷೆ ಹಾಗೂ 500 ರೂಪಾಯಿ ದಂಡವನ್ನು ವಿಧಿಸಿ ಆದೇಶ ಹೊರಡಿಸಿದೆ.

ABOUT THE AUTHOR

...view details