ಗದಗ: ರೈತರೊಬ್ಬನ ಜಮೀನಿನ ಬೆಳೆ ಮೇಯಿಸಿದ್ದಕ್ಕೆ ಮನನೊಂದು ಕುರಿಗಾಹಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದಲ್ಲಿ ನಡೆದಿದೆ.
ಮಾಡಿದ ಸಣ್ಣ ತಪ್ಪಿಗೆ, ಆತ್ಮಹತ್ಯೆ ಮಾಡಿಕೊಂಡನಾ ಕುರಿಗಾಯಿ? - ಹಿರೇವಡ್ಡಟ್ಟಿ ಕುರಿಗಾಯಿ ಸಾವು
ಬೇರೆಯವರ ಜಮೀನಿನಲ್ಲಿ ಕುರಿ ಮೇಯಿಸಿದ್ದಕ್ಕೆ ಮನನೊಂದು ಕುರಿಗಾಯಿಯೊರ್ವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.

ತಾಮ್ರಗುಂಡಿ ನಿವಾಸಿ ಕುಮಾರ ವಡ್ಡಟ್ಟಿ(20) ಮೃತ ಕುರಿಗಾಯಿ. ಕುಮಾರ್, ಹಿರೇವಡ್ಡಟ್ಟಿ ಗ್ರಾಮದ ದೇವಪ್ಪ ಹೊಂಬಳ ಎಂಬ ರೈತನ ಜಮೀನಿನಲ್ಲಿದ್ದ ಹುಣಸೆ ಗಿಡಗಳನ್ನು ಮೇಯಿಸಿದ್ದ, ಇದಕ್ಕೆ ಪ್ರತಿಯಾಗಿ ರೈತ ಕುರಿಗಳನ್ನು ತೆಗೆದುಕೊಂಡು ಹೋಗಿ ಬೆಳೆ ನಷ್ಟ ಇಲ್ಲವೆ ಕುರಿಗಳನ್ನು ಕೊಡುವಂತೆ ಬೇಡಿಕೆಯಿಟ್ಟಿದ್ದನೆಂದು ಮೃತನ ಕುಟುಂಬದವರು ಆರೋಪಿಸಿದ್ದಾರೆ.
ಈ ಘಟನೆಯಿಂದ ಭಯಗೊಂಡು ಕುಮಾರ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತಪಡಿಸಲಾಗಿದೆ. ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.