ಗದಗ :ಈಗ ಎಲ್ಲ ಕಡೆ ಲಾಕಡೌನ್ ಜಾರಿಯಾಗಿದೆ. ಈ ನಡುವೆ ಜನರು ಹೊರಗಡೆ ಬರುವುದಕ್ಕೆ ಇನ್ನಿಲ್ಲದ ಕಾರಣ ಹೇಳ್ತಾರೆ. ಇಂದು ಸಹ ಒಬ್ಬ ವ್ಯಕ್ತಿ ಕೋಳಿಗೆ ಅತಿಯಾದ ಭೇದಿ ಆಗ್ತಿದ್ದು, ಅದನ್ನು ಆಸ್ಪತ್ರೆಗೆ ತೋರಿಸೋಕೆ ಬಂದಿದ್ದೀನಿ ಅಂತಾ ಹೇಳಿದ್ದಾನೆ. ಇದರಿಂದ ಪೊಲೀಸರು ಕಕ್ಕಾಬಿಕ್ಕಿ ಆಗಿದ್ದಾರೆ.
ಕೋಳಿಗೆ ಭೇದಿ ಆಗಿದೆ, ಆಸ್ಪತ್ರೆಗೆ ಕರೆದೊಯ್ಯುತ್ತಿರುವೆ ಎಂದ ವ್ಯಕ್ತಿ.. ಪೊಲೀಸರು ಕಕ್ಕಾಬಿಕ್ಕಿ! - ಗದಗ ಪೊಲೀಸರಿಗೆ ಶಾಕ್,
ಕೋಳಿಗೆ ಭೇದಿ ಆಗಿದೆ. ಅದನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇನೆ ಎಂದು ವ್ಯಕ್ತಿಯೊಬ್ಬ ಹೇಳಿದ್ದನ್ನು ಕೇಳಿ ಪೊಲೀಸರೇ ಶಾಕ್ ಆಗಿರುವ ಘಟನೆ ಗದಗದಲ್ಲಿ ನಡೆದಿದೆ.
ಕೋಳಿಗೆ ಭೇದಿ ಆಗಿದೆ, ಅದನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇನೆ
ನಗರದ ಟಾಂಗಾಕೂಟ ವೃತ್ತದಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿವೋರ್ವ ಚೀಲದಲ್ಲಿ ಕೋಳಿಯನ್ನು ಒಯ್ಯುತ್ತಿದ್ದನು. ಈ ವೇಳೆ ಪ್ರಶ್ನಿಸಿದ ಪೊಲೀಸರಿಗೆ ಆ ವ್ಯಕ್ತಿ ಕೋಳಿಗೆ ನಿನ್ನೆಯಿಂದ ಎರಡು ಸಾರಿ ಭೇದಿ ಆಗಿದೆ. ಹಾಗಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇನೆ ಅಂತಾ ಸಬೂಬು ನೀಡಿದ್ದಾನೆ.
ವ್ಯಕ್ತಿಯ ಕಾರಣ ಕೇಳಿ ಪೊಲೀಸರು ಕಕ್ಕಾಬಿಕ್ಕಿಯಾಗಿದ್ದಾರೆ. ಲಾಕ್ಡೌನ್ ಟೆನ್ಶನ್ ನಡುವೆ ಪೊಲಿಸರಿಗೆ ಒಂದಿಷ್ಟು ಕಾಮಿಡಿ ನೀಡಿದ ವ್ಯಕ್ತಿಯನ್ನು ಪಾಪ ಅಂತಾ ಬಿಟ್ಟು ಕಳುಹಿಸಿದ್ದಾರೆ.