ಕರ್ನಾಟಕ

karnataka

ETV Bharat / state

12 ಸಾವಿರ ರೂ. ಸಂಬಳ ಬಿಟ್ಟು ಬಂದ ಇವರದ್ದು ಈಗ ವರ್ಷಕ್ಕೆ ಕೋಟ್ಯಂತರ ರೂ. ವ್ಯವಹಾರ!

ಬೆಂಗಳೂರಿನಲ್ಲಿ ಉದ್ಯೋಗದಿಂದ ಸಂತೃಪ್ತನಾಗದ ವ್ಯಕ್ತಿಯೊಬ್ಬರು ತನ್ನ ಹುಟ್ಟೂರಿನಲ್ಲಿ ಉದ್ದಿಮೆಯೊಂದನ್ನು ಸ್ಥಾಪಿಸಿ ವಾರ್ಷಿಕವಾಗಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿದ್ದಾರೆ.

By

Published : Jul 8, 2020, 5:05 PM IST

basaveshwara engineering works
ಬಸವೇಶ್ವರ ಇಂಜಿನಿಯರಿಂಗ್​ ವರ್ಕ್ಸ್​

ಗದಗ:ಸಾಮಾನ್ಯವಾಗಿ ಉದ್ಯೋಗ ಅರಸಿ ಯುವಕರು ನಗರ ಪ್ರದೇಶಗಳಿಗೆ ವಲಸೆ ಹೋಗುವುದುಂಟು. ಆದರೆ ಇಲ್ಲೊಬ್ಬರು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಮಾಡುತ್ತಿದ್ದ ಕೆಲಸ ತ್ಯಜಿಸಿ ಸ್ವಂತ ಉದ್ದಿಮೆಯೊಂದನ್ನು ಆರಂಭಿಸಿ ಈಗ ವಾರ್ಷಿಕ ಕೋಟ್ಯಂತರ ರೂಪಾಯಿ ವ್ಯವಹಾರ ಮಾಡುತ್ತಿದ್ದಾರೆ.

ಬಸವೇಶ್ವರ ಎಂಜಿನಿಯರಿಂಗ್​ ವರ್ಕ್ಸ್​

ಜಿಲ್ಲೆಯ ರೋಣ ತಾಲೂಕಿನ ನರೇಗಲ್ ಗ್ರಾಮದ ಬಸವರಾಜ ಒಂಕಲಕುಂಟೆ ತಾನು ಓದಿದ ಮೆಕ್ಯಾನಿಕಲ್ ಎಂಜಿನಿಯರಿಂಗ್​ ಆಧಾರದ ಮೇಲೆ ಬೆಂಗಳೂರಿನ ಟಪೆ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಆದರೆ ಇವರಿಗೆ ಬರುತ್ತಿದ್ದದ್ದು ಕೇವಲ 12 ಸಾವಿರ ರೂಪಾಯಿ ಸಂಬಳ. ಇದರಿಂದ ತೃಪ್ತರಾಗದ ಬಸವರಾಜ ತನ್ನೂರಿಗೆ 2007ರಲ್ಲಿ ವಾಪಸ್​​ ಆಗಿ ಮೂರು ಬ್ಯಾಂಕ್​​ನಲ್ಲಿ ಸಾಲ ಪಡೆದು ಒಟ್ಟು ನಾಲ್ಕು ಲಕ್ಷ ರೂಪಾಯಿಯಲ್ಲಿ ಬಸವೇಶ್ವರ ಎಂಜಿನಿಯರಿಂಗ್​ ವರ್ಕ್ಸ್​ ಎಂಬ ಉದ್ದಿಮೆ ಸ್ಥಾಪಿಸಿದರು.

ಉದ್ದಿಮೆ ಆರಂಭದ ದಿನಗಳಲ್ಲಿ ಸಾಕಷ್ಟು ಕಷ್ಟಗಳಿಗೆ ಸಿಲುಕಿದ ಇವರು ಛಲ ಬಿಡದೇ ಅನೇಕಾನೇಕ ಎಂಜಿನಿಯರಿಂಗ್​ ವಸ್ತುಗಳನ್ನು ಉತ್ಪಾದಿಸಿ ಕೈ ಸುಟ್ಟುಕೊಂಡಿದ್ದರು. ಆದರೂ ಕೂಡಾ ಸಣ್ಣಪುಟ್ಟ ಮಷಿನ್​ಗಳಲ್ಲೇ ಟ್ರ್ಯಾಕ್ಟರ್, ಟ್ರೇಲರ್, ಸ್ಕೂಲ್ ಡೆಸ್ಕ್​ಗಳನ್ನು ತಯಾರಿಸಿ, ಗ್ರಾಮಗಳಿಗೆ ಸೈಕಲ್​ ಮೂಲಕ ತೆರಳಿ ಜನರಿಗೆ ಪರಿಚಯಿಸುತ್ತಿದ್ದರು. ಈಗ ಆ ಉದ್ದಿಮೆ ಬೃಹದಾಕಾರವಾಗಿ ಬೆಳೆದು ಸುಮಾರು 20 ಮಂದಿಗೆ ಕೆಲಸ ನೀಡುತ್ತಿದೆ. ಇಲ್ಲಿ ತಯಾರಾಗುವ ವಸ್ತುಗಳು ರಾಜ್ಯದ ನಾನಾ ಭಾಗಗಳಿಗೆ ರಫ್ತಾಗುತ್ತವೆ. ಈಗ ಜನರ ಪಾಲಿಗೆ ಬಸವರಾಜ್ ಅಚ್ಚರಿಯಾಗಿ​ ಕಾಣುತ್ತಿದ್ದಾರೆ.

ABOUT THE AUTHOR

...view details