ಗದಗ:ಬೈಕ್ ಸ್ಕಿಡ್ ಆಗಿ ಸವಾರನ ಮೇಲೆ ಬಿದ್ದ ಪರಿಣಾಮ ಸ್ಥಳದಲ್ಲೇ ಸವಾರ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ರೋಣ ಪಟ್ಟಣದ ಮುಗಳಿ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ನಡೆದಿದೆ.
ವಿಚಿತ್ರ ರೀತಿಯಲ್ಲಿ ಬೈಕ್ ಸ್ಕಿಡ್, ಸವಾರ ಸ್ಥಳದಲ್ಲೇ ಸಾವು
ಬೈಕ್ ಸ್ಕಿಡ್ ಆಗಿ ಸವಾರನ ಮೇಲೆಯೇ ಬಿದ್ದು, ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಗದಗ ಜಿಲ್ಲೆ ರೋಣ ಪಟ್ಟಣ ವ್ಯಾಪ್ತಿಯಲ್ಲಿ ನಡೆದಿದೆ.
ಬೈಕ್ ಸವಾರ ಸ್ಥಳದಲ್ಲೇ ಸಾವು
ಮೃತನನ್ನು ರೋಣ ಪಟ್ಟಣದ ಶರಣಪ್ಪ ಮಡಿವಾಳರ್ (26) ಎಂದು ಗುರುತಿಸಲಾಗಿದೆ. ಬಾರ್ ಬೆಂಡಿಂಗ್ ಕೆಲಸ ಮಾಡ್ತಿದ್ದ ಈತ ಮುಗಳಿ ಗ್ರಾಮಕ್ಕೆ ಕೆಲಸಕ್ಕಾಗಿ ಹೊರಟಿದ್ದ ವೇಳೆ ನಿಯಂತ್ರಣ ತಪ್ಪಿ ಬೈಕ್ ಶರಣಪ್ಪನ ಮೇಲೆ ಬಿದ್ದಿದೆ.
ರೋಣ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.