ಗದಗ: ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದಲ್ಲಿ ಕೆಲ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ. ರೋಣ ತಾಲೂಕಿನ ಹೊಳೆ ಆಲೂರು ಗ್ರಾಮವು ಸಂಪೂರ್ಣವಾಗಿ ಮಲಪ್ರಭಾ ನದಿಯ ಪ್ರವಾಹಕ್ಕೆ ಸಿಲುಕಿದೆ.
ಸ್ವಲ್ಪ ಕುಗ್ಗಿದ ಮಲಪ್ರಭಾ ನದಿ ಪ್ರವಾಹ... ಪರಿಹಾರಕ್ಕಾಗಿ ಗದಗ ಜನರ ಒತ್ತಾಯ - ಮಹಾರಾಷ್ಟ್ರದಲ್ಲಿ ಭಾರಿ
ಕೆಲ ಭಾಗದಲ್ಲಿ ಮಳೆ ಈಗ ಸ್ವಲ್ವ ಕಡಿಮೆ ಆಗಿರೋದ್ರಿಂದ ತಮ್ಮ ತಮ್ಮ ಮನೆಗಳಲ್ಲಿರುವ ಕೆಲವು ಪ್ರಮುಖ ವಸ್ತುಗಳನ್ನು ಬೇರೆಡೆಗೆ ಸ್ಥಳಾಂತರ ಮಾಡುತ್ತಿದ್ದಾರೆ.
ಮಲಪ್ರಭಾ ನದಿ ನೀರಿನ ಮಟ್ಟ ಹೆಚ್ಚಳ:
ಕಳೆದ ನಾಲೈದು ದಿನಗಳಿಂದ ಹೊಳೆ ಆಲೂರು ಗ್ರಾಮಸ್ಥರು ಮನೆ, ಮಠ ಇಲ್ಲದೇ ಪರದಾಡುತ್ತಿದ್ದಾರೆ. ಮಳೆ ಈಗ ಪ್ರವಾಹ ಕಡಿಮೆ ಆಗಿರೋದ್ರಿಂದ ತಮ್ಮ ತಮ್ಮ ಮನೆಗಳಲ್ಲಿರುವ ಕೆಲವು ಪ್ರಮುಖ ವಸ್ತುಗಳನ್ನು ಬೇರೆಡೆಗೆ ಸ್ಥಳಾಂತರ ಮಾಡುತ್ತಿದ್ದಾರೆ.
ಇನ್ನು ವಿಠಲಾಪುರ, ಬಿದರಳ್ಳಿ ಹಾಗೂ ಹಳೆ ಸಿಂಗಟಾಲೂರು ಗ್ರಾಮಗಳ ಬಳಿ 3 ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಈ ಗ್ರಾಮಗಳ ಜನರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ.