ಕರ್ನಾಟಕ

karnataka

ETV Bharat / state

ಮಲಪ್ರಭಾ ನದಿ ನೀರು ಹೆಚ್ಚಳ: ಮುನ್ನೆಚ್ಚರಿಕೆ ಕ್ರಮವಾಗಿ ಎಚ್ಚರಿಕೆ ನೀಡಿದ ಜಿಲ್ಲಾಡಳಿತ...! - ಮಲಪ್ರಭಾ ಹಾಗೂ ನವೀಲು ತೀರ್ಥ ಜಲಾಶಯ ಗರಿಷ್ಟ ಮಟ್ಟ

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಆರ್ಭಟದಿಂದಾಗಿ ಹಲವಾರು ನದಿಗಳು ತುಂಬಿ ಹರಿಯುತ್ತಿದ್ದು, ಮಲಪ್ರಭಾ ನದಿಯ ಅಚ್ಚುಕಟ್ಟು ಪ್ರದೇಶಗಳಲ್ಲಿಯೂ ಸಹ ಭಾರಿ ಮಳೆಯಾಗುತ್ತಿದೆ. ಹೀಗಾಗಿ ಗದಗ ಜಿಲ್ಲೆಗೂ ಪ್ರವಾಹದ ಭೀತಿ ಎದುರಾಗಿದೆ.ಇದರಿಂದಾಗಿ ಎಚ್ಚೆತ್ತ ಜಿಲ್ಲಾ ಆಡಳಿತ ನದಿ ದಡದ ಗ್ರಾಮಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬೇರೆಡೆ ಸ್ಥಳಾಂತರಗೊಳ್ಳಲು ಜನರಿಗೆ ಎಚ್ಚರಿಕೆ ನೀಡಿದೆ.

ಶಾಸಕ ಸಿಸಿ ಪಾಟೀಲ್ ಗ್ರಾಮದ ಜನರಿಗೆ ಎಚ್ಚರಿಕೆ ನೀಡುತ್ತಿದ್ದಾರೆ

By

Published : Aug 6, 2019, 6:37 PM IST

ಗದಗ:ಜಿಲ್ಲೆಯ ನರಗುಂದ ತಾಲೂಕಿನ ಲಕಮಾಪೂರ ಹಾಗೂ ಬೂದಿಹಾಳ ಗ್ರಾಮಗಳಲ್ಲಿ ಎಚ್ಚರಿಕೆ ನಿಡಲಾಗಿದ್ದು. ಈ ಎರಡೂ ಗ್ರಾಮದ ಗ್ರಾಮಸ್ಥರು ಬೇರೆಡೆ ಸ್ಥಳಾಂತರಗೊಳ್ಳಲು ತಿಳಿಸಲಾಗಿದೆ ಎಂದು ಗದಗ‌ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

ಮಲಪ್ರಭಾ ನದಿ ನೀರು ಹೆಚ್ಚಳ; ಮುನ್ನೆಚ್ಚರಿಕೆಯ ಕ್ರಮವಾಗಿ ಎಚ್ಚರಿಕೆ ನೀಡಿದ ಜಿಲ್ಲಾಡಳಿತ

ಗ್ರಾಮಸ್ಥರ ಸ್ಥಳಾಂತರಕ್ಕೆ ಮುಂಜಾಗ್ರತಾ ಕ್ರಮವಾಗಿ ಸೂಕ್ತ ಕ್ರಮ ಕೈಗೊಳ್ಳಲಾಗಿದ್ದು ಮಲಪ್ರಭಾ ಹಾಗೂ ನವೀಲು ತೀರ್ಥ ಜಲಾಶಯ ಗರಿಷ್ಠ ಮಟ್ಟ ತಲುಪುವುದರಲ್ಲಿದೆ. ಹಾಗಾಗಿ ಯಾವುದೇ ಕ್ಷಣದಲ್ಲಿ ಜಲಾಶಯದಿಂದ ನದಿಗೆ ನೀರು ಹರಿಬಿಡಲಾಗುವುದು. ಆದ್ದರಿಂದ ನದಿ ದಡದ ಮೇಲಿರುವ ಗ್ರಾಮಗಳಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಜೊತೆಗೆ ನರಗುಂದ ಶಾಸಕ ಸಿಸಿ ಪಾಟೀಲ್ ಸಹ ಬಿಜೆಪಿ ಕಾರ್ಯಕರ್ತರ ವಾಟ್ಸ್​​ಆ್ಯಪ್​ ಗ್ರೂಪ್ ಮೂಲಕ ಜನರಿಗೆ ಮಾಹಿತಿ ಹಂಚಿಕೊಂಡು ಗ್ರಾಮದ ಜನರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.

ABOUT THE AUTHOR

...view details