ಕರ್ನಾಟಕ

karnataka

ETV Bharat / state

ಗದಗದಲ್ಲಿ ಮಹಾನವಮಿ ಸಂಭ್ರಮ: ದಾಂಡಿಯಾಗೆ ಹೆಜ್ಜೆ ಹಾಕಿ ಸಂಭ್ರಮಿಸಿದ ಮಹಿಳೆಯರು - ಕಾಳಿದಾಸ ಶಿಕ್ಷಣ ಸಂಸ್ಥೆಯ ಕೌಶಲ್ಯಾಭಿವೃದ್ಧಿ ಇಲಾಖೆ ತರಬೇತಿ

ನವರಾತ್ರಿ ಹಬ್ಬದ ಪ್ರಯುಕ್ತ ಗದಗ ನಗರದಲ್ಲಿ ಸಂಭ್ರಮ ಮನೆಮಾಡಿತ್ತು. ಮಹಿಳೆಯರು, ಮಕ್ಕಳು ಹಬ್ಬದ ಹಿನ್ನೆಲೆಯಲ್ಲಿ ಹಾಡು, ನೃತ್ಯ ಮಾಡಿ ಖುಷಿಪಟ್ಟರು.

mahanavami-nights-celebrated-with-dandiya-dance-in-gadag
ಗದಗ: ಮಹಾನವಮಿಯಂದು ಮಹಿಳೆಯರ ಮಸ್ತ್​ ಡ್ಯಾನ್ಸ್

By

Published : Oct 12, 2021, 12:45 PM IST

ಗದಗ: ಮನೆ, ಮಕ್ಕಳು, ಪತಿ ಅಂತೆಲ್ಲಾ ನಿತ್ಯ ಕಾಲ ಕಳೆಯುತ್ತಿದ್ದ ಮಹಿಳೆಯರು ಅಲ್ಲಿ ಒಂದಷ್ಟು ಹೊತ್ತು ಜಂಜಾಟ ಮರೆತು ಹಬ್ಬದ ಸಡಗರದಲ್ಲಿ ಪಾಲ್ಗೊಂಡಿದ್ದರು. ಹೌದು, ನಗರದ ಕಾಳಿದಾಸ ಶಿಕ್ಷಣ ಸಂಸ್ಥೆಯ ಕೌಶಲ್ಯಾಭಿವೃದ್ಧಿ ಇಲಾಖೆ ತರಬೇತಿ ವಿಭಾಗ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾರಿಯರು ಸಂಭ್ರಮಿಸಿದ್ದಾರೆ.

ಮಹಾನವಮಿಯಂದು ಮಹಿಳೆಯರ ಮಸ್ತ್​ ಡ್ಯಾನ್ಸ್

ಮಹಾನವಮಿ ಹಬ್ಬದ ಪ್ರಯುಕ್ತ ಸಾಂಸ್ಕೃತಿಕ ಹಬ್ಬ ಆಚರಿಸಲಾಗಿತ್ತು. ಈ ವೇಳೆ ಬಣ್ಣಬಣ್ಣದ ಸೀರೆಯುಟ್ಟ ನಾರಿಯರು ಹಾಡಿಗೆ ಕುಣಿದು ರಂಜಿಸಿದ್ದಾರೆ. ಸಾಂಪ್ರದಾಯಿಕ ನೃತ್ಯ ಸೇರಿ ದಾಂಡಿಯಾ ನೃತ್ಯ ನೆರೆದವರ ಗಮನ ಸೆಳೆಯಿತು.

ಬಳಿಕ ಮಹಿಳೆಯರು ರ್ಯಾಂಪ್ ಮೇಲೆ ಹೆಜ್ಜೆ ಹಾಕಿದರು. ಸಿನಿಮಾ ನಟಿಯರಿಗಿಂತ ನಾವೇನು ಕಡಿಮೆ ಇಲ್ಲ ಎನ್ನುವ ವಿಶ್ವಾಸ ಅವರಲ್ಲಿ ಕಂಡುಬಂತು. ಇದೇ ವೇಳೆ, ಚಿಣ್ಣರು ಕೂಡಾ ತಮ್ಮಿಷ್ಟದ ಹಾಡಿಗೆ ಕುಣಿದು ಕುಪ್ಪಳಿಸಿದರು.

ABOUT THE AUTHOR

...view details