ಗದಗ: ಮಹಾದಾಯಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಪಟ್ಟಂತೆ ರಾಜ್ಯಕ್ಕೆ ಮತ್ತೊಮ್ಮೆ ಭಾರಿ ಹಿನ್ನಡೆಯಾಗಿದೆ.
ಗೋವಾದ ಒತ್ತಡದ ಹಿನ್ನೆಲೆಯಲ್ಲಿ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯು ಯೋಜನೆಯ ಜಾರಿ ಆದೇಶವನ್ನು ಇದ್ದಕ್ಕಿದ್ದಂತೆ ಅಮಾನತ್ತು ಮಾಡುವುದಾಗಿ ಪ್ರಕಟಿಸಿದೆ. ಕೇಂದ್ರದ ಈ ನಡೆಗೆ ಶಾಸಕ ಹೆಚ್.ಕೆ.ಪಾಟೀಲ ಟ್ವೀಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆಚ್.ಕೆ.ಪಾಟೀಲ್ ಟ್ವೀಟ್ ಕೇಂದ್ರದ ಕರ್ನಾಟಕದ ಸಚಿವರೇ ಎಲ್ಲಿದ್ದೀರಿ? ಎಂದು ಪ್ರಶ್ನಿಸುವ ಮೂಲಕ ಕರ್ನಾಟಕ್ಕಕ್ಕಾಗುವ ಅನ್ಯಾಯ ತಪ್ಪಿಸಿ. ಮುಖ್ಯಮಂತ್ರಿಗಳೇ ಗಂಭೀರವಾದ ಹೆಜ್ಜೆಯಿಡಿ ಎಂದು ರಾಜ್ಯದ ಯಡಿಯೂರಪ್ಪ ಅವರಿಗೆ ಈ ವಿಷಯದ ಬಗ್ಗೆ ಗಮನ ಸೆಳೆದಿದ್ದಾರೆ.
ಅಕ್ಟೋಬರ್ 10ರಂದು ಪರಿಸರ ಮತ್ತು ಅರಣ್ಯ ಇಲಾಖೆ ಮಂಜೂರಾತಿ ಯೋಜನೆಗೆ ನೀಡಿತ್ತು. ಇದೀಗ ಗೋವಾ ಸರ್ಕಾರದ ಮನವಿಗೆ ಓಗೊಟ್ಟು ಕೇಂದ್ರ ಸರ್ಕಾರ ಮಂಜೂರಾತಿಗೆ ತಡೆ ನೀಡಿದ ಪರಿಣಾಮ ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ.