ಗದಗ:ಕಳೆದ ನಾಲ್ಕು ವರ್ಷಗಳಿಂದ ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ಮಹದಾಯಿ ನೀರಿಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಿರುವ ರೈತಸೇನಾ ರಾಜ್ಯಾಧ್ಯಕ್ಷ ವೀರೇಶ್ ಸೊಬರದಮಠ ಅವರು ತಮಗೆ ನಿನ್ನೆ ರಾತ್ರಿ 9.30ರ ಸುಮಾರಿಗೆ ಜೀವ ಬೆದರಿಕೆಯ ಕರೆ ಬಂದಿರೋದಾಗಿ ಆರೋಪಿಸಿದ್ದಾರೆ.
ಮಹದಾಯಿ ಹೋರಾಟಗಾರ ವೀರೇಶ್ ಸೊಬರದಮಠಗೆ ಜೀವ ಬೆದರಿಕೆ ಕರೆ! -
ಮಹದಾಯಿ ನೀರಿಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಿರುವ ರೈತಸೇನಾ ರಾಜ್ಯಾಧ್ಯಕ್ಷ ವೀರೇಶ್ ಸೊಬರದಮಠ ಅವರು ತಮಗೆ ನಿನ್ನೆ ರಾತ್ರಿ ಜೀವ ಬೆದರಿಕೆಯ ಕರೆ ಬಂದಿರೋದಾಗಿ ಆರೋಪಿಸಿದ್ದಾರೆ.

ಮಹದಾಯಿ ಹೋರಾಟಗಾರ ವೀರೇಶ್ ಸೊಬರದಮಠಗೆ ಜೀವ ಬೆದರಿಕೆ ಕರೆ!
ನಿನ್ನೆ ರಾತ್ರಿ 9.36ರ ಸಮಯದಲ್ಲಿ ದುಷ್ಕರ್ಮಿಯೊಬ್ಬ 6362923008 ನಂಬರ್ನಿಂದ ಕರೆ ಮಾಡಿ, ಎಂಟು ದಿನದಲ್ಲಿ ತಮ್ಮನ್ನು ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ ಎಂದು ವೀರೇಶ್ ಆರೋಪಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿಯೂ ಸ್ಪಷ್ಟನೆ ನೀಡಿದ್ದಾರೆ. ಕರೆ ಮಾಡಿದ ದುಷ್ಕರ್ಮಿಗೆ, ಎಲ್ಲಿಗೆ ಬರಬೇಕು ಅಲ್ಲಿಗೇ ಬರುತ್ತೇನೆ ಎಂದು ಹೇಳಿದಾಗ ಕರೆ ಕಟ್ ಮಾಡಿದ್ದಾನೆ ಎಂದು ವೀರೇಶ್ ತಿಳಿಸಿದ್ದಾರೆ.
ಈ ಘಟನೆ ಕುರಿತು ನರಗುಂದ ಪೊಲೀಸರಿಗೆ ಮಾಹಿತಿ ನೀಡಿರೋದಾಗಿಯೂ ವೀರೇಶ್ ಸೊಬರದಮಠ ಸ್ಪಷ್ಟ ಪಡಿಸಿದ್ದಾರೆ.