ಗದಗ: ಕೆಳ ವರ್ಗದ ಜನಗಳು ಆಮಿಷ ಅಥವಾ ಬೇರೆ ಶಕ್ತಿಗಳ ಕೈವಾಡದಿಂದ ಪಾಕಿಸ್ತಾನ ಪರ ಘೋಷಣೆ ಕೂಗುತ್ತಿದ್ದಾರೆ ಎಂಬುದು ತನಿಖೆ ನಂತರ ತಿಳಿಯಲಿದೆ ಎಂದು ಗಣಿ ಮತ್ತು ಭೂ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
ಕೆಳವರ್ಗದ ಜನ ಆಮಿಷಕ್ಕೆ ಒಳಗಾಗಿ ದೇಶದ್ರೋಹದ ಘೋಷಣೆ ಕೂಗುತ್ತಿದ್ದಾರೆ: ಸಚಿವ ಸಿ.ಸಿ.ಪಾಟೀಲ್ - ಗದಗನಲ್ಲಿ ಸಚಿವ ಸಿಸಿ ಪಾಟೀಲ್ ಸುದ್ದಿಗೋಷ್ಠಿ
ಕೆಳ ವರ್ಗದ ಜನರು ಆಮಿಷ ಅಥವಾ ಬೇರೆ ಶಕ್ತಿಗಳ ಕೈವಾಡದಿಂದ ಪಾಕಿಸ್ತಾನ ಪರ ಘೋಷಣೆ ಕೂಗುತ್ತಿದ್ದಾರೆ ಎಂಬುದು ತನಿಖೆಯ ನಂತರ ತಿಳಿಯಲಿದೆ ಎಂದು ಗಣಿ ಮತ್ತು ಭೂ ಇಲಾಖೆ ಸಚಿವ ಸಿಸಿ ಪಾಟೀಲ್ ಹೇಳಿದ್ದಾರೆ.
ಸಚಿವ ಸಿಸಿ ಪಾಟೀಲ್
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ಉದ್ಯಾನದಂತಹ ಪವಿತ್ರ ಸ್ಥಳದಲ್ಲಿ ಇಂತಹ ಘೋಷಣೆ ಕೂಗಿದ್ದಾರೆ. ಕಾರ್ಯಕ್ರಮ ಆಯೋಜಕರು ಆಹ್ವಾನ ನೀಡದೆ ಆಕೆ ಕೈಯಲ್ಲಿ ಮೈಕ್ ಹೇಗೆ ಬಂತು? ಎಂದು ಪ್ರಶ್ನಿಸಿದರು. ದೇಶದ್ರೋಹಿ ಸಂಘಟನೆಗಳ ಜೊತೆ ಯುವ ಜನಾಂಗ ಕೈ ಜೋಡಿಸುತ್ತಿರುವದು ವಿಷಾದದ ಸಂಗತಿ ಎಂದರು.
ರಾಜ್ಯ ಸರ್ಕಾರ ಅಮೂಲ್ಯಾಳ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ದೇಶದ್ರೋಹದ ಕಾನೂನಿನಡಿ ಆಕೆಯ ವಿರುದ್ಧ ಕ್ರಮ ಕೈಗೊಂಡಿದೆ.