ಕರ್ನಾಟಕ

karnataka

ETV Bharat / state

ನರಗುಂದದಲ್ಲಿ ಮತ್ತೆ ಭೂ ಕುಸಿತ... ಅವಶೇಷಗಳಡಿ ಸಿಲುಕಿದ್ದ ಬಾಲಕಿಯ ರಕ್ಷಣೆ!- ವಿಡಿಯೋ

ನರಗುಂದದಲ್ಲಿ ಮತ್ತೆ ಭೂ ಕುಸಿತ ಉಂಟಾಗಿ ಬಾಲಕಿಯೊಬ್ಬಳು ಅವಶೇಷಗಡಿ ಸಿಲುಕಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.

By

Published : Jul 21, 2020, 6:42 AM IST

Updated : Jul 21, 2020, 10:18 AM IST

KN_GDG_01_BALAKI_RAKSHANE_7203292
ಅವಶೇಷಗಳಡಿ ಸಿಲುಕಿದ್ದ ಬಾಲಕಿಯ ರಕ್ಷಣೆ

ಗದಗ: ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಮತ್ತೆ ಭೂ ಕುಸಿತ ಉಂಟಾಗಿ ಬಾಲಕಿಯೊಬ್ಬಳು ಅವಶೇಷಗಳಡಿ ಸಿಲುಕಿ ನರಳಾಡಿರುವ ಭಯಾನಕ ಘಟನೆ ನಡೆದಿದೆ.

ನರಗುಂದ ಪಟ್ಟಣದ ಕುರಬಗಟ್ಟಿ ಏರಿಯಾದಲ್ಲಿ ಘಟನೆ ನಡೆದಿದ್ದು ನಿಂಗಪ್ಪ ನಿಗ್ಗಾನಟ್ಟಿ ಎಂಬುವವರ ಮನೆ ಕುಸಿದಿದೆ. ಈ ವೇಳೆ, ಅವರ 14 ವರ್ಷದ ಮಗಳು ರೇಣುಕಾ ಎಂಬಾಕೆ ಅವಶೇಷಗಳಡಿ ಸಿಲುಕಿ ನರಳಾಡಿದ್ದಾರೆ.

ಅವಶೇಷಗಳಡಿ ಸಿಲುಕಿದ್ದ ಬಾಲಕಿಯ ರಕ್ಷಣೆ
ಅವಶೇಷಗಳಡಿ ಸಿಲುಕಿದ್ದ ಬಾಲಕಿಯ ರಕ್ಷಣೆ

ಮನೆ ಕುಸಿದ ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯರು ಬಾಲಕಿಯನ್ನ ತಕ್ಷಣ ರಕ್ಷಣೆ ಮಾಡುವುದಕ್ಕೆ ಮುಂದಾಗಿದ್ದಾರೆ. ಸುಮಾರು 2 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬಾಲಕಿಯನ್ನು ರಕ್ಷಿಸಿದ್ದಾರೆ.

ಸದ್ಯ ಬಾಲಕಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಇನ್ನು ನರಗುಂದ ಪಟ್ಟಣದಲ್ಲಿ ಪದೇ ಪದೆ ಭೂ ಕುಸಿತದ ಘಟನೆಗಳು ಪ್ರವಾಹದ ಬಳಿಕ ಸಂಭವಿಸುತ್ತಿದೆ. ಹಿಂದೆಯೂ ಸಹ ವೃದ್ಧನೊಬ್ಬ ಮತ್ತು ಎತ್ತು ಭೂ ಕುಸಿತದಲ್ಲಿ ಸಿಲುಕಿಕೊಂಡು ಪ್ರಾಣಾಪಾಯದಿಂದ ಪಾರಾಗಿತ್ತು.

ಇನ್ನು ಈ ಭಾಗದಲ್ಲಿ ಅಂತರ್ಜಲ ಹೆಚ್ಚು ಇರುವುದರಿಂದ ಪದೇ ಪದೆ ಭೂಕುಸಿತವಾಗ್ತಿದೆ ಅನ್ನೊ ಕಾರಣ ಒಂದಾದರೆ, ಇಲ್ಲಿ ಹಿಂದಿನ ಕಾಲದಲ್ಲಿ ಧಾನ್ಯಗಳನ್ನ ಸಂಗ್ರಹಿಸಿ ಇಡಲು ತೋಡಲಾಗಿದ್ದ ಹಗೆಗಳು ಇವೆಯಂತೆ. ಅಕಸ್ಮಾತ್ ಅವುಗಳ ಕುಸಿಯುತ್ತಿವೆ ಅಂತಾ ಸ್ಥಳೀಯರು ಹೇಳುತ್ತಿದ್ದಾರೆ.

ಕನಿಷ್ಠ 30 ಕ್ಕೂ ಹೆಚ್ಚು ಬಾರಿ ಈ ಪಟ್ಟಣದಲ್ಲಿ ಭೂಮಿ ಕುಸಿದಿದೆ. ಪದೇ ಪದೆ ಭೂ ಕುಸಿತ ಉಂಟಾಗುತ್ತಿರುವ ಹಿನ್ನೆಲೆ ಈಗಾಗಲೇ ಎರಡು ಬಾರಿ ಭೂ ವಿಜ್ಞಾನಿಗಳ ತಂಡ ಈ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದೆ.

Last Updated : Jul 21, 2020, 10:18 AM IST

ABOUT THE AUTHOR

...view details