ಗದಗ: ಜಿಲ್ಲೆಯ ನರಗುಂದ ಪಟ್ಟಣದ ಕಸಬಾ ಓಣಿಯಲ್ಲಿ ಮತ್ತೆ ಭೂಕುಸಿತ ಉಂಟಾಗಿದ್ದು, ಶರಣಪ್ಪ ಕಟ್ಟೇಕರ್ ಅವರ ಮನೆಯಲ್ಲಿ ಸುಮಾರು 10 ಅಡಿ ಆಳದವರೆಗೂ ಭೂಕುಸಿತ ಉಂಟಾಗಿದೆ.
ನರಗುಂದದಲ್ಲಿ ಏಕಾಏಕಿ ಕುಸಿದ ಭೂಮಿ... ಪ್ರಾಣಾಪಾಯದಿಂದ ಪಾರಾದ ದಂಪತಿ! - gadaga latest news
ನರಗುಂದ ಪಟ್ಟಣದ ಕಸಬಾ ಓಣಿಯಲ್ಲಿ ಮತ್ತೆ ಭೂಕುಸಿತ ಉಂಟಾಗಿದ್ದು, ಶರಣಪ್ಪ ಕಟ್ಟೇಕರ್ ಅವರ ಮನೆಯಲ್ಲಿ ಸುಮಾರು 10 ಅಡಿ ಆಳದವರೆಗೂ ಭೂಕುಸಿತ ಉಂಟಾಗಿದೆ.
ಕುಸಿದ ಗುಂಡಿಯಲ್ಲಿ ಬಿದ್ದಿದ್ದ ಶರಣಪ್ಪ ಹಾಗೂ ರೇಣವ್ವ ದಂಪತಿಯನ್ನು ಸ್ಥಳೀಯರು ಹಾಗೂ ಕುಟುಂಬದ ಇತರೆ ಸದಸ್ಯರು ಹಗ್ಗದ ಸಹಾಯದಿಂದ ಮೇಲೆತ್ತಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಮೂರನೇ ಬಾರಿ ಪಟ್ಟಣದಲ್ಲಿ ಭೂಕುಸಿತ ಉಂಟಾಗ್ತಿದೆ. ಗಣಿ ಇಲಾಖೆ ಸಚಿವ ಸಿ.ಸಿ. ಪಾಟೀಲ್ ಅವರ ತವರು ಕ್ಷೇತ್ರ ನರಗುಂದದಲ್ಲಿ ಉಂಟಾಗ್ತಿರೋ ಭೂಕುಸಿತ ಪ್ರಕರಣಗಳಿಂದ ಪಟ್ಟಣದ ನಿವಾಸಿಗಳು ಆತಂಕದಲ್ಲಿ ಹೊತ್ತು ಕಳೆಯೋ ಪರಿಸ್ಥಿತಿಯಲ್ಲಿದ್ದಾರೆ.
ಭೂ ಕುಸಿತ ಉಂಟಾದೆಡೆಯಲ್ಲೆಲ್ಲಾ ನೀರು ನಿಲ್ಲುತ್ತಿರುವುದೂ ಸಹ ಜನರ ಆತಂಕವನ್ನು ಹೆಚ್ಚಿಸಿದೆ. ಭೂ ವಿಜ್ಞಾನಿಗಳ ತಂಡ ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ವರದಿ ಸಲ್ಲಿಸಿದ್ರೂ ಸಹ ಏನೂ ಪ್ರಯೋಜನವಾಗಿಲ್ಲವೆಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.