ಗದಗ: ಲಂಚ ಪಡೆಯುತ್ತಿದ್ದ ಕಾರ್ಮಿಕ ಇಲಾಖೆಯ ಮಹಿಳಾ ಅಧಿಕಾರಿ ಅನುರಾಧ ಎಂಬುವರು ಎಸಿಬಿ ಬಲೆಗೆ ಬಿದ್ದಿದ್ದಾರೆ.
ಕಾರ್ಮಿಕ ಇಲಾಖೆಯಿಂದ ಸ್ವ-ಉದ್ಯೋಗ ಮಷಿನ್ ಅಳವಡಿಸಲು ಪರವಾನಗಿ ನೀಡುವಂತ ಫಲಾನುಭವಿ ಮೆಹಬೂಬ್ ಸಾಬ್ ಕನಕೆನವರ್ ಎಂಬುವರು ಅರ್ಜಿ ಸಲ್ಲಿಸಿದ್ದರು. ಆದರೆ ಪರಾವಾನಗಿ ನೀಡದೆ ಸತಾಯಿಸುತ್ತಿದ್ದ ಅಧಿಕಾರಿ ಅನುರಾಧ, 2,500 ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರಂತೆ. ಈ ಬಗ್ಗೆ ಮೆಹಬೂಬ್ ಸಾಬ್ ಎಸಿಬಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಎಸಿಬಿ ಅಧಿಕಾರಿಗಳು, ಮೆಹಬೂಬ್ ಸಾಬ್ರಿಂದ ಲಂಚ ಪಡೆಯುತ್ತಿದ್ದಾಗ ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.