ಕರ್ನಾಟಕ

karnataka

ETV Bharat / state

ಗದಗ: ಅವ್ಯವಸ್ಥೆಯ ಆಗರವಾದ ಮೊರಾರ್ಜಿ ವಸತಿ ಶಾಲೆ - Lack of infrastructure to gadag Morarji residential school

ಕೊರೊನಾ ಆತಂಕದ ನಡುವೆಯೇ ವಿದ್ಯಾರ್ಥಿಗಳು ವಸತಿ ಶಾಲೆಗೆ ಆಗಮಿಸಿದ್ದಾರೆ. ಆದರೆ, ಗದಗ ಜಿಲ್ಲೆಯ ರೋಣ ಪಟ್ಟಣದ ಮೊರಾರ್ಜಿ ವಸತಿ ಶಾಲೆಯು ಕನಿಷ್ಠ ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದು, ಇಲ್ಲಿನ ಮಕ್ಕಳು ಪರದಾಟ ನಡೆಸುವಂತಹ ಸ್ಥಿತಿ ನಿರ್ಮಾಣವಾಗಿದೆ.

ಮೊರಾರ್ಜಿ ವಸತಿ ಶಾಲೆ
ಮೊರಾರ್ಜಿ ವಸತಿ ಶಾಲೆ

By

Published : Sep 24, 2021, 7:46 AM IST

ಗದಗ: ಜಿಲ್ಲೆಯ ರೋಣ ಪಟ್ಟಣದ ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆಯ ಆಗರವಾಗಿದ್ದು, ಟಾಯ್ಲೆಟ್​ನಲ್ಲೇ ವಿದ್ಯಾರ್ಥಿಗಳು ಸ್ನಾನ ಮಾಡುವ ದುಃಸ್ಥಿತಿ ಎದುರಾಗಿದೆ. ಮೊರಾರ್ಜಿ ವಸತಿ ಶಾಲೆಯು ಈ ಹಿಂದೆ ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದಲ್ಲಿತ್ತು. ಆದರೆ‌, 2019 ರಲ್ಲಿ ಉಂಟಾದ ಪ್ರವಾಹದಿಂದಾಗಿ ರೋಣ ಪಟ್ಟಣದ ಹೊರವಲಯದ ಸರ್ಕಾರಿ ಕಟ್ಟಡಕ್ಕೆ ವಸತಿ ಶಾಲೆ ಶಿಫ್ಟ್ ಮಾಡಲಾಗಿದೆ. ಪರಿಣಾಮ ಮೂಲ ಸೌಕರ್ಯವಿಲ್ಲದೇ ಪ್ರತಿಭಾವಂತ ವಿದ್ಯಾರ್ಥಿಗಳು ನರಕ ಯಾತನೆ ಅನುಭವಿಸುತ್ತಿದ್ದಾರೆ.

ಸೌಕರ್ಯಗಳಿಂದ ವಂಚಿತವಾದ ವಸತಿ ಶಾಲೆ

ಹೌದು, ಒಂದೇ ರೂಂನಲ್ಲಿ 30 ರಿಂದ 40 ವಿದ್ಯಾರ್ಥಿಗಳನ್ನು ಹಾಕಿದ್ದಾರೆ. ಇರುವ ಮೂರ್ನಾಲ್ಕು ಶೌಚಾಲಯದಲ್ಲೇ ಗಂಟೆ ಗಟ್ಟಲೇ ನಿಂತು ತಮ್ಮ ದಿನಚರಿಗಳನ್ನು ಮುಗಿಸಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ವಸತಿ ಶಾಲೆಯಲ್ಲಿ ಪಾಠ ಕೇಳಲು ಸರಿಯಾದ ಬೆಂಚ್ ವ್ಯವಸ್ಥೆ ಇಲ್ಲ. 8 ರಿಂದ 10 ನೇ ತರಗತಿ ವಿದ್ಯಾರ್ಥಿಗಳು ನೆಲದ ಮೇಲೆ ಕುಳಿತು ಪಾಠ ಕೇಳುತ್ತಿದ್ದಾರೆ. ಸೂಕ್ತ ಬೆಡ್ ವ್ಯವಸ್ಥೆ ಇಲ್ಲ. ರೂಂ ಕಿಟಕಿಗಳು ಒಡೆದು ಹೋಗಿದ್ದು, ಆತಂಕದಲ್ಲೇ ರಾತ್ರಿ ಮಲಗಿಕೊಳ್ಳಬೇಕು ಎಂದು ವಿದ್ಯಾರ್ಥಿಗಳು ಈಟಿವಿ ಭಾರತಕ್ಕೆ ಅಳಲು ತೋಡಿಕೊಂಡಿದ್ದಾರೆ.

ಇನ್ನು ಈ ಕುರಿತು ಗದಗ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ಕೇಳಿದ್ರೆ, ಕೂಡಲೇ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.

ABOUT THE AUTHOR

...view details