ಗದಗ :ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಯಳವತ್ತಿ ಗ್ರಾಮ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ.
ಯಳವತ್ತಿ ಗ್ರಾಮ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದ ಶಿವಕುಮಾರ ಉದಾಸಿ ಅವರ ಆದರ್ಶ ಗ್ರಾಮವಾಗಿದ್ದು, ವಿಪರ್ಯಾಸ ಎಂದರೆ ಈ ಆದರ್ಶ ಗ್ರಾಮದಲ್ಲಿ ಓಡಾಡಲು ಸರಿಯಾದ ರಸ್ತೆಯೇ ಇಲ್ಲ.

ಸಂಸದರು ಹೆಚ್ಚಿನ ಮುತುವರ್ಜಿ ವಹಿಸಿ ಸಾಕಷ್ಟು ಅಭಿವೃದ್ದಿ ಕೆಲಸ ಮಾಡಿಸಿದ್ದಾರಂತೆ. ಆದರೆ, ಗ್ರಾಮದಲ್ಲಿ ರೈತರು ತಾವೂ ಬೆಳೆದ ಬೆಳೆಯಯನ್ನು ಸಾಗಿಸಲು ಕೂಡ ರಸ್ತೆ ವ್ಯವಸ್ಥೆ ಇಲ್ಲ. ಮುಂಗಾರು ಬೆಳೆಗಳಾದ ಹೆಸರು, ಶೇಂಗಾ ಕಟಾವಿಗೆ ಬಂದಿದೆ. ಮಳೆ ವಿರಾಮ ನೀಡಿದಾಗ ಫಸಲನ್ನು ಮನೆಗೆ ತರಬೇಕು ಎಂದುಕೊಂಡಿರುವ ರೈತರು, ರಸ್ತೆ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ.
ಯಳವತ್ತಿ ಗ್ರಾಮದಲ್ಲಿ ಹೆಚ್ಚಾಗಿ ಈರುಳ್ಳಿ, ಹತ್ತಿ, ಶೇಂಗಾ, ಗೋವಿನ ಜೋಳ ಬೆಳೆಯಲಾಗುತ್ತದೆ. ಅತಿಯಾದ ಮಳೆಯಿಂದ ಶೇಂಗಾ ಬೆಳೆ ಜಮೀನಿನಲ್ಲಿ ಕೊಳೆಯುತ್ತಿದೆ. ಅಳಿದು ಉಳಿದ ಫಸಲನ್ನು ಮನೆಗೆ ತರಲು ಆಗುತ್ತಿಲ್ಲ. ಇರುವ ರಸ್ತೆ ಕೆಸರು ಗದ್ದೆಯಂತಾಗಿದ್ದು, ಸಂಚರಿಸಲು ಅಸಾಧ್ಯವಾಗಿದೆ. ಈ ಬಗ್ಗೆ ಗ್ರಾಮ ಪಂಚಾಯತಿ ಹಾಗೂ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಒಂದು ಎಕರೆ ಶೇಂಗಾ ಬೆಳೆಯಲು ಸುಮಾರು 20 ಸಾವಿರ ರೂಪಾಯಿ ಖರ್ಚು ಮಾಡಿದ್ದೇವೆ. ಬೆಳೆದ ಬೆಳೆ ಜಮೀನಿನಲ್ಲಿ ಹಾಗೆ ಉಳಿದಿದೆ. ಎತ್ತಿನ ಚಕ್ಕಡಿ, ಟ್ರ್ಯಾಕ್ಟರ್ ಮೂಲಕ ತರಬೇಕು. ಆದರೆ, ಅವುಗಳು ಕೆಸರಿನಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿವೆ. ಗ್ರಾಮದಿಂದ ದೂರವಿರುವ ಜಮೀನುಗಳಿಗೆ ನಡೆದು ಹೋಗಲು ಆಗುತ್ತಿಲ್ಲ. ಹೀಗಾಗಿ, ಈ ಭಾಗದ ಸಂಸದರಾದ ಶಿವಕುಮಾರ ಉದಾಸಿ ಅವರು, ತಮ್ಮ ಆದರ್ಶ ಗ್ರಾಮದ ಸ್ಥಿತಿಯನ್ನು ಒಂದು ಸಾರಿ ಬಂದು ನೋಡಲಿ ಎಂದು ರೈತರು ಆಗ್ರಹಿಸುತ್ತಿದ್ದಾರೆ.