ಕರ್ನಾಟಕ

karnataka

ETV Bharat / state

ಕ್ಷುಲ್ಲಕ ಕಾರಣ: ಕೆಎಸ್ಆರ್​ಟಿಸಿ ಬಸ್​ ಡ್ರೈವರ್​ ಮೇಲೆ ಬೈಕ್​ ಸವಾರರ ಅಟ್ಟಹಾಸ! - ಗಾಯಾಳು ಚಾಲಕ ಆಸ್ಪತ್ರೆಗೆ ದಾಖಲು

ಗದಗ ಜಿಲ್ಲೆಯ ಹುಯಿಲಗೋಳ ಬಳಿ ಅಮಾನವೀಯ ಘಟನೆಯೊಂದು ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಇಬ್ಬರೂ ಬೈಕ್​ ಸವಾರರು ಕೆಎಸ್​ಆರ್​ಟಿಸಿ ಬಸ್​ ಚಾಲಕನನ್ನು ಮನಸೋಯಿಚ್ಛೆ ಥಳಿಸಿದ್ದಾರೆ.

ಕೆಎಸ್ಆರ್​ಟಿಸಿ ಚಾಲಕನ ಮೇಲೆ ಹಲ್ಲೆ

By

Published : Aug 16, 2019, 1:16 PM IST

ಗದಗ: ಹೆಡ್ ಲೈಟ್​ನ ಬೆಳಕು ಜಾಸ್ತಿಯಾಗಿದೆ ಅಂತಾ ಕ್ಷುಲ್ಲಕ ಕಾರಣಕ್ಕೆ ಕೆಎಸ್ಆರ್​ಟಿಸಿ ಬಸ್​ ಚಾಲಕನನ್ನು ಹಿಗ್ಗಾಮುಗ್ಗಾ ಥಳಿಸಿರುವ ಅಮಾನವೀಯ ಘಟನೆ ತಾಲೂಕಿನ ಹುಯಿಲಗೋಳ ಬಳಿ ನಡೆದಿದೆ.

ಯರೇಬೇಲೇರಿ ಗ್ರಾಮಕ್ಕೆ ಹೊರಟಿದ್ದ ಬಸ್​ಗೆ ಎದುರಾಗಿ ಇಬ್ಬರು ಬುಲೆಟ್ ಸವಾರರು ಬಂದಿದ್ದಾರೆ. ಈ ವೇಳೆ ಏಕಾಏಕಿ ಬಸ್ ಅಡ್ಡಗಟ್ಟಿರೋ ಸವಾರರು ಚಾಲಕ ವೀರೇಶ್ ರಕ್ಕಸಗಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಲ್ಲದೆ, ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಕೆಎಸ್ಆರ್​ಟಿಸಿ ಬಸ್​ ಡ್ರೈವರ್​ ಮೇಲೆ ಬೈಕ್​ ಸವಾರರ ಅಟ್ಟಹಾಸ

ಈ ವೇಳೆ ಬಸ್​ನಲ್ಲಿದ್ದ ಮಹಿಳಾ ಪ್ರಯಾಣಿಕರೋರ್ವರು ಥಳಿಸಬೇಡಿ ಎಂದು ಬೇಡಿಕೊಂಡರೂ ಬಿಡದ ಕಿಡಿಗೇಡಿಗಳು, ಚಾಲಕ ವೀರೇಶ್ ಅವರನ್ನು ಮನಸೋಇಚ್ಛೆ ಥಳಿಸಿದ್ದಾರೆ. ಈ ದೃಶ್ಯ ಪ್ರಯಾಣಿಕರೊಬ್ಬರ ಮೊಬೈಲ್​ನಲ್ಲಿ ಸೆರೆಯಾಗಿದೆ.

ತೀವ್ರವಾಗಿ ಥಳಿತಕ್ಕೊಳಗಾದ ಚಾಲಕನಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಟಗೇರಿ ಪೊಲೀಸರು ಚಾಲಕ ವೀರೇಶ್​​ರಿಂದ ಘಟನೆ ಕುರಿತು ಮಾಹಿತಿ ಪಡೆದಿದ್ದು, ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details