ಕರ್ನಾಟಕ

karnataka

ETV Bharat / state

ಕೃಷ್ಣಾಪುರ ಗ್ರಾಮ ಸೀಲ್​ ಡೌನ್:​ ಹಾಲಿಗಾಗಿ ಮಕ್ಕಳ ಗೋಳಾಟ - Krishnapur Village

ಏ. 2ರಂದು ಏಕಾಏಕಿ ಕೃಷ್ಣಾಪುರ ಸೀಲ್ ಡೌನ್ ಮಾಡಲಾಗಿದ್ದು, ಗ್ರಾಮ ಬಿಟ್ಟು ಹೊರ ಹೋಗುವಂತಿಲ್ಲ ಎಂದು ಆದೇಶಿಸಲಾಗಿದೆ. ಹಾಗಾಗಿ ಅಗತ್ಯ ವಸ್ತುಗಳಳಿಗಾಗಿ ಗ್ರಾಮದ ಜನರು ಪರದಾಡುತ್ತಿದ್ದಾರೆ.

Krishnapur Village Seal Down
ಕೃಷ್ಣಾಪುರ ಗ್ರಾಮ ಸೀಲ್​ ಡೌನ್:​ ಹಾಲಿಗಾಗಿ ಮಕ್ಕಳ ಪರದಾಟ

By

Published : May 5, 2020, 10:37 PM IST

Updated : May 6, 2020, 11:50 AM IST

ಗದಗ: ಜಿಲ್ಲೆಯ ರೋಣ ತಾಲೂಕಿನ ಕೃಷ್ಣಾಪುರದ 25 ವರ್ಷದ ಗರ್ಭಿಣಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಆ ಪ್ರದೇಶವನ್ನ ಕಂಟೈನ್​ಮೆಂಟ್​ ಏರಿಯಾ ಎಂದು ಜಿಲ್ಲಾಧಿಕಾರಿ ಘೋಷಣೆ ಮಾಡಿದ್ದಾರೆ.

ಆದ್ರೆ ಕಂಟೈನ್​ಮೆಂಟ್ ಏರಿಯಾದ ಜನರಿಗೆ ಜಿಲ್ಲಾಡಳಿತ ನೀಡಬೇಕಿದ್ದ ಅಗತ್ಯ ವಸ್ತುಗಳನ್ನ ನೀಡದ ಹಿನ್ನೆಲೆಯಲ್ಲಿ ಅಲ್ಲಿನ ಜನರು ಪರದಾಡುತ್ತಿದ್ದಾರೆ. ಹಾಲು, ತರಕಾರಿ, ಅಗತ್ಯ ವಸ್ತುಗಳಿಗಾಗಿ ಜನರು ಪರದಾಡುತ್ತಿದ್ದಾರೆ. ಅಲ್ಲದೇ ಹಾಲು ಇಲ್ಲದೇ ಮಕ್ಕಳು ಗೋಳಾಡುತ್ತಿವೆ ಎಂದು ತಾಯಂದಿರು ಅಳಲು ತೋಡಿಕೊಂಡಿದ್ದಾರೆ.

ಏ. 2ರಂದು ಏಕಾಏಕಿ ಕೃಷ್ಣಾಪುರ ಸೀಲ್ ಡೌನ್ ಮಾಡಲಾಗಿದ್ದು, ಗ್ರಾಮ ಬಿಟ್ಟು ಹೊರ ಹೋಗುವಂತಿಲ್ಲ ಎಂದು ಆದೇಶಿಸಲಾಗಿದೆ. ಹಾಗಾಗಿ ಅಗತ್ಯ ವಸ್ತುಗಳನ್ನು ಪೂರೈಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಸ್ಪಂದಿಸುತ್ತಿಲ್ಲ ಎಂದು ಈ ಪ್ರದೇಶದ ಮಹಿಳೆಯರು ತಮ್ಮ ಅಳಲು ತೋಡಿಕೊಂಡಿದ್ದಾರೆ.

Last Updated : May 6, 2020, 11:50 AM IST

ABOUT THE AUTHOR

...view details