ಕರ್ನಾಟಕ

karnataka

ETV Bharat / state

ಯಾವ್ನೋ ಈಶ್ವರಪ್ಪ ಅಂತೆ, ಅವನೊಬ್ಬ ತಲೆಕೆಟ್ಟ ಈಶ್ವರಪ್ಪ.. ಏಕವಚನದಲ್ಲೇ ಡಿಕೆಶಿ ವಾಗ್ದಾಳಿ

ಕೆಂಪು ಕೋಟೆ ಮೇಲೆ ತ್ರಿವರ್ಣ ತೆಗೆದು ಕೇಸರಿ ಧ್ವಜ ಹಾರಿಸುವಂತ ಕಾಲ ನಿರ್ಮಾಣ ಆಗುತ್ತದೆ ಅಂತ ಹೇಳಿದ್ದಾನೆ. ಶಿವಮೊಗ್ಗದಲ್ಲಿ ರಾಷ್ಟ್ರ ಧ್ವಜ ತೆಗೆದು ಕೇಸರಿ ಧ್ವಜ ಹಾರಿಸಿದ್ದಾರೆ. ಆದರೆ ಇದರ ಬಗ್ಗೆ ಸಿಎಂ ಬೊಮ್ಮಾಯಿ ತುಟಿ ಪಿಟಿಕ್ ಅಂತಿಲ್ಲ. ಬೊಮ್ಮಾಯಿ ಯಾವ ಮಾತನ್ನು ಆಡುತ್ತಿಲ್ಲ, ಬಾಯಿಗೆ ಹೊಲಿಗೆ ಹಾಕೊಂಡಿದ್ದಾರೆ ಎಂದು ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದರು..

ಡಿಕೆಶಿ ವಾಗ್ದಾಳಿ
ಡಿಕೆಶಿ ವಾಗ್ದಾಳಿ

By

Published : Feb 13, 2022, 4:32 PM IST

ಗದಗ ​:ಕೆಂಪುಕೋಟೆ ಮೇಲೆ ತ್ರಿವರ್ಣ ಧ್ವಜ ಬದಲು ಕೇಸರಿ ಧ್ವಜ ಹಾರಿಸೋ ಕಾಲ ನಿರ್ಮಾಣ ಆಗುತ್ತೆ ಅಂತಾ ಹೇಳಿಕೆ ನೀಡಿದ್ದ ಸಚಿವ ಕೆ ಎಸ್ ಈಶ್ವರಪ್ಪ ವಿರುದ್ದ ಡಿಕೆಶಿ ಹರಿ ಹಾಯ್ದಿದ್ದಾರೆ. ಯಾವ್ನೋ ಈಶ್ವರಪ್ಪ ಅಂತೆ. ಅವನೊಬ್ಬ ತಲೆಕೆಟ್ಟ ಈಶ್ವರಪ್ಪ. ಸಿಎಂ ಬೊಮ್ಮಾಯಿ ಮತ್ತು ಗವರ್ನರ್​ ಇಬ್ಬರು ಅವರನ್ನ ಮಡಿಕೊಂಡು ಕೂತವರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಸಚಿವ ಕೆ ಎಸ್‌ ಈಶ್ವರಪ್ಪ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಾಗ್ದಾಳಿ ನಡೆಸಿರುವುದು..

ನಗರದಲ್ಲಿ ನಡೆದ ಡಿಜಿಟಿಲ್ ಸದಸ್ಯತ್ವ ನೋಂದಣಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾಷಣದುದ್ದಕ್ಕೂ ಬಿಜೆಪಿ ಸರಕಾರದ ವಿರುದ್ಧ ಗುಡುಗಿದರು. ಕಾಂಗ್ರೆಸ್ ಸರಕಾರ ಇದ್ದಿದ್ದರೆ ಹತ್ತು ನಿಮಿಷದಲ್ಲಿ ಅವನ ರಾಜೀನಾಮೆ ಪಡೆಯುತ್ತಿದ್ದೆವು. ಕೆಂಪು ಕೋಟೆ ಮೇಲೆ ತ್ರಿವರ್ಣ ತೆಗೆದು ಕೇಸರಿ ಧ್ವಜ ಹಾರಿಸುವಂತ ಕಾಲ ನಿರ್ಮಾಣ ಆಗುತ್ತದೆ ಅಂತಾ ಹೇಳಿದ್ದಾನೆ.

ಶಿವಮೊಗ್ಗದಲ್ಲಿ ರಾಷ್ಟ್ರಧ್ವಜ ತೆಗೆದು ಕೇಸರಿ ಧ್ವಜ ಹಾರಿಸಿದ್ದಾರೆ. ಆದರೆ, ಇದರ ಬಗ್ಗೆ ಸಿಎಂ ಬೊಮ್ಮಾಯಿ ತುಟಿ ಪಿಟಿಕ್ ಅಂತಿಲ್ಲ. ಬೊಮ್ಮಾಯಿ ಯಾವ ಮಾತನ್ನು ಆಡುತ್ತಿಲ್ಲ, ಬಾಯಿಗೆ ಹೊಲಿಗೆ ಹಾಕೊಂಡಿದ್ದಾರೆ ಅಂತಾ ಆಕ್ರೋಶ ವ್ಯಕ್ತಪಡಿಸಿದರು.

ಸಂವಿಧಾನ ಹೆಸರಲ್ಲಿ ಏನು ಪ್ರಮಾಣವಚನ ಸ್ವೀಕರಿಸಿದ್ದಾರೆ ಇವರು ಅಂತಾ ಪ್ರಶ್ನಿಸಿದ ಡಿಕೆಶಿ, ಈ ಬಗ್ಗೆ ನಾವು ಅಸೆಂಬ್ಲಿಯಲ್ಲಿ ಧ್ವನಿ ಎತ್ತುತ್ತೇವೆ. ಈಶ್ವರಪ್ಪ ಮೇಲೆ ಕೇಸ್ ಹಾಕಬೇಕು ಅಂತಾ ಆಗ್ರಹಿಸಿದರು.

ಇತ್ತ ಪೊಲೀಸ್ ಇಲಾಖೆ ವಿರುದ್ಧ ಡಿಕೆಶಿ ಕೆಂಡ ಕಾರಿದರು. ರಾಜ್ಯದ ಪೊಲೀಸರು, ಅಧಿಕಾರಿಗಳು ಬಿಜೆಪಿ ಕಾರ್ಯಕರ್ತರಂತೆ ಕೆಲಸ‌ ಮಾಡುತ್ತಿದ್ದಾರೆ. ಸರಕಾರಿ ನೌಕರರಾಗಿ ಕೆಲಸ ಮಾಡುತ್ತಿಲ್ಲ. ಬಿಜೆಪಿ ವರ್ಕರ್ ಆಗಿ ಕೆಲಸ ಮಾಡುತ್ತಿದ್ದಾರೆ ಅಂತಾ ಗಂಭೀರ ಆರೋಪ ಮಾಡಿದರು. ಅಧಿಕಾರಿಗಳಿಗೆ ನಾನು ಹೇಳುತ್ತೇನೆ ಇದು ಶಾಶ್ವತ ಅಲ್ಲ. ದೊಡ್ಡ ಅಧಿಕಾರಿನೇ ಇರಲಿ, ಸಣ್ಣ ಅಧಿಕಾರಿನೇ ಇರಲಿ ಅವರ ವರ್ತನೆ ಗಮನಿಸುತ್ತಿದ್ದೇವೆ ಎಂದರು.

For All Latest Updates

TAGGED:

ABOUT THE AUTHOR

...view details