ಗದಗ : ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ಗ್ರಾಮ ಪಂಚಾಯಿತಿ ಕಚೇರಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿದಘಟನೆ ನಡೆದಿದೆ.
ಅಸಮರ್ಪಕ ನೀರು ಪೂರೈಕೆ... ಗ್ರಾಪಂಗೆ ಗ್ರಾಮಸ್ಥರ ಮುತ್ತಿಗೆ
ವಾರದಿಂದ ತಾಂಡಾದಲ್ಲಿ ನೀರಿನ ಸಮಸ್ಯೆಯಿದೆ, ರೈತರ ಹೊಲಗಳಿಂದ ನೀರು ತರುತ್ತಿದ್ದೇವೆ. ಆದ್ರೆ ರೈತರೂ ಸಹ ನೀರನ್ನು ನೀಡ್ತಿಲ್ಲ.
ಮ ಪಂಚಾಯತಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಅಡರಕಟ್ಟಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು, ವಾರದಿಂದ ತಾಂಡಾದಲ್ಲಿ ನೀರಿನ ಸಮಸ್ಯೆಯಿದೆ. ರೈತರ ಹೊಲಗಳಿಂದ ನೀರು ತರುತ್ತಿದ್ದೇವೆ. ಆದ್ರೆ ರೈತರೂ ಸಹ ನೀರನ್ನು ನೀಡ್ತಿಲ್ಲ ಅಂತ ಆರೋಪಿಸಿದ್ರು.
ಗ್ರಾಮಸ್ಥರು ಖಾಲಿ ಕೊಡಗಳನ್ನು ಪ್ರದರ್ಶಿಸುವ ಮೂಲಕ, ನೀರು ಕೊಡಿ ಜೀವ ಉಳಿಸಿ ಎಂದು ಘೋಷಣೆ ಕೂಗಿದ್ರು. ಕೂಡಲೇ ನೀರಿನ ಸಮಸ್ಯೆ ಪರಿಹರಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ರು.