ಕರ್ನಾಟಕ

karnataka

ಮೋದಿ ವಿಷದ ಹಾವು ಇದ್ದಂತೆ ಹೇಳಿಕೆಗೆ ಖರ್ಗೆ ಕ್ಷಮೆ ಕೇಳಬೇಕು, ಸಚಿವ ಸಿ ಸಿ ಪಾಟೀಲ್ ಒತ್ತಾಯ

By

Published : Apr 28, 2023, 12:56 PM IST

Updated : Apr 28, 2023, 1:56 PM IST

ಪ್ರಧಾನಿ ಮೋದಿ ಭಾರತ ದೇಶಕ್ಕೆ ಮಾತ್ರವಲ್ಲ ಇಡೀ ವಿಶ್ವದ ನಾಯಕರು. ಮೋದಿ ಬಗ್ಗೆ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಕೀಳುಮಟ್ಟದಲ್ಲಿ ಹಿಯಾಳಿಸಿರೋದು ಖಂಡನೀಯ :ಸಚಿವ ಸಿ ಸಿ ಪಾಟೀಲ್

Minister CC Patil spoke to the media.
ಸಚಿವ ಸಿ ಸಿ ಪಾಟೀಲ್ ಮಾಧ್ಯಮದವರ ಜತೆ ಮಾತನಾಡಿದರು.

ಸಚಿವ ಸಿ ಸಿ ಪಾಟೀಲ್ ಮಾಧ್ಯಮದವರ ಜತೆ ಮಾತನಾಡಿದರು.

ಗದಗ:ಪ್ರಧಾನಿ ನರೇಂದ್ರ ಮೋದಿ ಮೋದಿ ವಿಷದ ಹಾವು ಇದ್ದಂತೆ ಎಂಬ ಹೇಳಿಕೆ ನೀಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬೇಷರತ್ ಕ್ಷಮೆ ಕೇಳಬೇಕು ಎಂದು ಸಚಿವ ಸಿಸಿ ಪಾಟೀಲ್ ಒತ್ತಾಯಿಸಿದ್ದಾರೆ. ಗದಗ ಜಿಲ್ಲೆಯ ನರಗುಂದದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, ದೇಶದ ಹೆಮ್ಮೆಯ ಪ್ರಧಾನಿ ಬಗ್ಗೆ ಕಾಂಗ್ರೆಸ್ ಹಿರಿಯ ಮುಖಂಡರು ಮಲ್ಲಿಕಾರ್ಜುನ ಖರ್ಗೆ ಅವರು ಕೀಳುಮಟ್ಟದಲ್ಲಿ ಹಿಯಾಳಿಸಿರೋದು ಖಂಡನೀಯ. ಪ್ರಧಾನಿ ಮೋದಿ ಅವರು ಭಾರತ ದೇಶಕ್ಕೆ ಮಾತ್ರವಲ್ಲ, ಇಡೀ ವಿಶ್ವದ ನಾಯಕರು. ಅವರ ಈ ಕೀಳು ಮಟ್ಟದ ಹೇಳಿಕೆ ಬಹಳ ನೋವು ತರಿಸಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮೋದಿಗೆ ರೆಡ್ ಕಾರ್ಪೆಟ್ ವೆಲ್ ಕಂ:ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದ ವೇಳೆ ಅವರಿಗೆ ವಿದೇಶದಲ್ಲಿ ಯಾವ ರೀತಿ ಸ್ವಾಗತ ಸಿಗುತ್ತಿತ್ತು. ಈಗ ಮೋದಿ ಅವರಿಗೆ ವಿದೇಶದಲ್ಲಿ ಯಾವ ರೀತಿ ರೆಡ್ ಕಾರ್ಪೆಟ್ ವೆಲ್ ಕಂ ಸಿಗುತ್ತಿದೆ ಅಂತ ಮಲ್ಲಿಕಾರ್ಜುನ ಖರ್ಗೆ ಅವರು ಸ್ವಲ್ಪ ಹಿಂತಿರುಗಿ ನೋಡಬೇಕು ಎಂದು ಆಗ್ರಹಿಸಿದ್ದಾರೆ.

ಮೋದಿ ಎದುರಿಸಲಾಗದೇ ಕಾಂಗ್ರೆಸ್ ಹತಾಶೆ:ವಿದೇಶದ ಪ್ರಧಾನಿಗಳು, ಅಧ್ಯಕ್ಷರು, ಸೇನಾನಾಯಕರು, ಮೋದಿಯವರು ಬಂದಿಳಿಯುವ ವಿಮಾನ ನಿಲ್ದಾಣಕ್ಕೆ ಬಂದು ಸ್ವಾಗತಿಸುತ್ತಾರೆ. ಇದನ್ನೆಲ್ಲ ನೋಡಿದರೆ ನಮ್ಮ ಹೆಮ್ಮೆಯ ಮೋದಿ ಜೀ ವಿಶ್ವನಾಯಕರು ಎಂಬುದರಲ್ಲಿ ಎರಡು ಮಾತಿಲ್ಲ. ಇಂತಹ ಜನಮೆಚ್ಚಿದ ನರೇಂದ್ರ ಮೋದಿ ಅವರನ್ನು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎದುರಿಸದೇ, ಹತಾಶೆಯಿಂದ ಅವಮಾನಿಸುತ್ತಾ ಬರುತ್ತಿದೆ ಎಂದು ಸಚಿವ ಪಾಟೀಲ್ ಆರೋಪಿಸಿದರು.

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಈ ಹಿಂದೆ ಮೋದಿ ಅವರನ್ನು ಸಾವಿನ ವ್ಯಾಪಾರಿ , ಚಾ ವಾಲಾ ಅಂತ ಕರೆದಿದ್ದರು. ಕೈ ನಾಯಕ ಸುರ್ಜೆವಾಲಾ ಅವರು ಮೋದಿ ಅವರ ಸಮಾಧಿ ಬಗ್ಗೆ ಮಾತನಾಡಿದ್ದರು. ರಾಹುಲ್ ಗಾಂಧಿ ಅವರು ಮೋದಿಯವರ ಜಾತಿ ಬಗ್ಗೆ ಅವಮಾನ ಮಾಡಿದ್ದರು ಎಂದು ಆಪಾದಿಸಿದರು.

ಕೀಳುಮಟ್ಟದ ಹೇಳಿಕೆ: ಈಗ ಮಲ್ಲಿಕಾರ್ಜುನ ಖರ್ಗೆ ಅವರು ಮೋದಿ ಅವರಿಗೆ ವಿಷದ ಹಾವೆಂದು ತುಚ್ಛವಾಗಿ ಜರಿದಿದ್ದಾರೆ. ಈ ಕೀಳುಮಟ್ಟದ ಹೇಳಿಕೆ ತೀವ್ರ ಖಂಡನೀಯ. ಮಲ್ಲಿಕಾರ್ಜುನ ಖರ್ಗೆ ಅವರು ಎಲುಬಿಲ್ಲದ ನಾಲಿಗೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.ಇಂತಹ ಕೀಳುಮಟ್ಟದ ಹೇಳಿಕೆಗಳು ಕಾಂಗ್ರೆಸ್ ಮುಖಂಡರಿಗೆ ಶೋಭೆ ತರುವುದಿಲ್ಲ ಎಂದು ತಿಳಿಸಿದರು.

ಖರ್ಗೆ ಬೇಷರತ್ ಕ್ಷಮೆ ಕೇಳಬೇಕು:ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ಮೋದಿಜಿ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ. ಇಂತಹ ವ್ಯಕ್ತಿತ್ವ ಹೊಂದಿರುವ ಮೋದಿಜಿ ಅವರನ್ನು ಕೀಳುಮಟ್ಟದಲ್ಲಿ ಟೀಕೆ ಮಾಡಿದ್ದು ಖಂಡನೀಯ. ಮಲ್ಲಿಕಾರ್ಜುನ ಖರ್ಗೆ ಬೇಷರತ್ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ದೊಡ್ಡಮಟ್ಟದ ಬೆಲೆ ತೆರಬೇಕಾಗುತ್ತದೆ. ಅವರ ಹೇಳಿಕೆ ಗದಗನ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿಯ ಗೆಲುವಿನ ನಾಗಾಲೋಟಕ್ಕೆ ಮತ್ತಷ್ಟು ವೇಗ ತಂದುಕೊಟ್ಟಿದೆ ಎಂದು ಹೇಳಿದರು.

ಇದನ್ನೂಓದಿ:ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎನ್ನುವವರು ಮುಸ್ಲಿಂ, ಕ್ರೈಸ್ತ​​ರಿಗೆ ಟಿಕೆಟ್ ಕೊಟ್ಟಿದ್ದಾರೆಯೇ: ಸಿದ್ದರಾಮಯ್ಯ ಪ್ರಶ್ನೆ

Last Updated : Apr 28, 2023, 1:56 PM IST

ABOUT THE AUTHOR

...view details