ಕರ್ನಾಟಕ

karnataka

ETV Bharat / state

ಆಕ್ಸಿಜನ್, ಬೆಡ್ ಬಗ್ಗೆ ಎಚ್ಚರ ವಹಿಸದಿದ್ರೆ ಕರ್ನಾಟಕ 2ನೇ ದಿಲ್ಲಿ ಆಗುತ್ತೆ ಹುಷಾರ್: ಹೆಚ್ ಕೆ ಪಾಟೀಲ್ - Karnataka becomes 2nd Delhi says H K Patil

ಮುಂಬರುವ ದಿನಗಳಲ್ಲಿ ಆಕ್ಸಿಜನ್, ಬೆಡ್ ಕೊರತೆ ತುಂಬಾನೆ ಎದುರಾಗಲಿದೆ ಎಂದು ಶಾಸಕ ಹೆಚ್ ಕೆ ಪಾಟೀಲ್ ಎಚ್ಚರಿಸಿದ್ದಾರೆ. ಸರ್ಕಾರ ಎಚ್ಚೆತ್ತುಕೊಳ್ಳದಿದ್ರೆ ಕರ್ನಾಟಕದ ಸ್ಥಿತಿ ದೆಹಲಿಯಂತೆ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

karnataka-becomes-2nd-delhi-says-h-k-patil
ಕೋವಿಡ್ ಆಸ್ಪತ್ರೆಗೆ ಶಾಸಕ ಹೆಚ್ ಕೆ ಪಾಟೀಲ್ ಭೇಟಿ ನೀಡಿ, ಪರಿಶೀಲಿಸಿದರು

By

Published : Apr 28, 2021, 8:40 PM IST

ಗದಗ:ಆಕ್ಸಿಜನ್, ಬೆಡ್ ಬಗ್ಗೆ ಸರ್ಕಾರ ಎಚ್ಚರ ವಹಿಸದಿದ್ರೆ ಕರ್ನಾಟಕ 2ನೇ ದೆಹಲಿ ಆಗುತ್ತೆ ಹುಷಾರ್ ಎಂದು ಶಾಸಕ ಹೆಚ್ ಕೆ ಪಾಟೀಲ್ ಎಚ್ಚರಿಸಿದ್ದಾರೆ.

ಕೋವಿಡ್ ಆಸ್ಪತ್ರೆಗೆ ಶಾಸಕ ಹೆಚ್ ಕೆ ಪಾಟೀಲ್ ಭೇಟಿ ನೀಡಿ, ಪರಿಶೀಲಿಸಿದರು

ಜಿಲ್ಲಾಸ್ಪತ್ರೆಯಲ್ಲಿನ ಕೋವಿಡ್ ಸೆಂಟರ್​ಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿ, ಮುಂಬರುವ ದಿನಗಳಲ್ಲಿ ಆಕ್ಸಿಜನ್, ಬೆಡ್ ಕೊರತೆ ತುಂಬಾನೆ ಎದುರಾಗಲಿದೆ. ಸರ್ಕಾರ ಈ ವಿಷಯದಲ್ಲಿ ಬಹಳಷ್ಟು ಅಸಡ್ಡೆತನ ಮಾಡಿದೆ. ಜನರ ಜೀವದ ಜೊತೆಗೆ ಸರ್ಕಾರ ಚೆಲ್ಲಾಟ ಆಡ್ತಿದೆ. ಸಾಲು ಸಾಲು ಹೆಣಗಳು ಬೀಳ್ತಿವೆ. ಆಕ್ಸಿಜನ್ ಗಾಗಿ ಜನ ಬಾಯಿ ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಕೆಳಮಟ್ಟದ ಮಾತುಗಳನ್ನಾಡಲು ನಾಚಿಕೆ ಆಗಲ್ವಾ ಅಂತ ಸಚಿವ ಸಿ ಟಿ ರವಿ ಅವರ ಹೇಳಿಕೆಗೆ ತಿರುಗೇಟು ನೀಡಿದರು.

ಗದಗ ಜಿಮ್ಸ್ ನಿರ್ದೇಶಕ ಪಿ ಎಸ್ ಭೂಸರೆಡ್ಡಿ, ಸರ್ಜನ್ ಜಿ ಎಸ್ ಪಲ್ಲೇದ್ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು, ಇದೇ ವೇಳೆ ಆಕ್ಸಿಜನ್ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜೊತೆಗೆ ಕೆಲವು ಸೋಂಕಿತರೊಂದಿಗೆ ಫೋನ್​ನಲ್ಲಿ ಸಂಭಾಷಣೆ ಮಾಡಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದರು.

ಓದಿ:ರಾಜ್ಯದಲ್ಲಿ ನಿಲ್ಲದ ಕೋವಿಡ್​ ಆರ್ಭಟ: 39,047 ಸೋಂಕಿತ ಪ್ರಕರಣ ದಾಖಲು,229 ಜನರು ಬಲಿ

For All Latest Updates

ABOUT THE AUTHOR

...view details