ಕರ್ನಾಟಕ

karnataka

ETV Bharat / state

ತಾಲೂಕು, ಪಟ್ಟಣಗಳಲ್ಲಿ ಕನ್ನಡ ನಾಮಫಲಕ ಕಡ್ಡಾಯ: ಇಲ್ಲದಿದ್ದರೆ ಮಸಿ ಬಳಿಯೋ ಎಚ್ಚರಿಕೆ

ತಾಲೂಕು ಹಾಗೂ ನಗರ ಪ್ರದೇಶಗಳಲ್ಲಿ ಕನ್ನಡ ನಾಮಫಲಕವೇ ಇರಬೇಕು. ಇಲ್ಲದೇ ಹೋದಲ್ಲಿ ಅಂತಹ ನಾಮಫಲಕಗಳಿಗೆ ಮಸಿ ಬಳಿಯಲಾಗುವುದು ಎಂದು ಕರವೇ ಶಿವರಾಮೇಗೌಡ ಬಣದ ಗದಗ ಜಿಲ್ಲಾಧ್ಯಕ್ಷ ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.

ಕರವೇಯಿಂದ ಮಸಿ ಬಳಿಯೋ ಎಚ್ಚರಿಕೆ

By

Published : Oct 10, 2019, 2:27 PM IST

ಗದಗ:ತಾಲೂಕು ಕೇಂದ್ರಗಳು ಹಾಗೂ ಪಟ್ಟಣ ಪ್ರದೇಶಗಳಲ್ಲಿನ ಅಂಗಡಿ ಮುಗ್ಗಟ್ಟುಗಳೂ ಸೇರಿದಂತೆ ಎಲ್ಲಡೆ ಕನ್ನಡ ನಾಮಫಲಕಗಳನ್ನು ಕಡ್ಡಾಯವಾಗಿ ಹಾಕಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಕರವೇ ಶಿವರಾಮೇಗೌಡ ಬಣದ ಗದಗ ಜಿಲ್ಲಾಧ್ಯಕ್ಷ ಮಂಜುನಾಥ್ ತಿಳಿಸಿದ್ದಾರೆ.

ಕರವೇಯಿಂದ ಮಸಿ ಬಳಿಯೋ ಎಚ್ಚರಿಕೆ

ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ತಾಲೂಕು ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕನ್ನಡ ನಾಮಫಲಕ ಕಡ್ಡಾಯಗೊಳಿಸಲು ನವಂಬರ್ 1ರವರೆಗೂ ಸಮಯ ನೀಡಲಾಗಿದೆ. ಒಂದು ವೇಳೆ, ಈ ನಿಯಮ ಜಾರಿಯಾಗದಿದ್ದಲ್ಲಿ ನವಂಬರ್ 1 ರಂದು ನಾಮಫಲಕಗಳಿಗೆ ಮಸಿ ಬಳಿದು ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details