ಗದಗ: ಭಾರತ-ಚೀನಾ ಗಡಿ ಭಾಗದ ಲಡಾಖ್ ಗಾಲ್ವಾನ್ನಲ್ಲಿ ಚೀನಾ ಕುತಂತ್ರಿ ಕಾರ್ಯ ವಿರೋಧಿಸಿ ಕನ್ನಡ ಕ್ರಾಂತಿ ಸೇನೆ ಕಾರ್ಯಕರ್ತರು ಗದಗ ಜಿಲ್ಲೆ ಮುಂಡರಗಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಗದಗ: ಚೀನಾ ಕುತಂತ್ರ ವಿರೋಧಿಸಿ ಕನ್ನಡ ಕ್ರಾಂತಿ ಸೇನೆ ಪ್ರತಿಭಟನೆ - Gadag Latest protest news
ಚೀನಾ ಕುತಂತ್ರಿ ಕಾರ್ಯ ವಿರೋಧಿಸಿ ಕನ್ನಡ ಕ್ರಾಂತಿ ಸೇನೆ ಕಾರ್ಯಕರ್ತರು ಗದಗ ಜಿಲ್ಲೆ ಮುಂಡರಗಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿದ ಕನ್ನಡ ಕ್ರಾಂತಿ ಸೇನೆ ಕಾರ್ಯಕರ್ತರು, ಚೀನಾ ಪ್ರಧಾನಿ ಪ್ರತಿಕೃತಿ ಭಾವಚಿತ್ರ ಹೊತ್ತು ಮೆರವಣಿಗೆ ಮಾಡಿ ಬಳಿಕ, ಮುಂಡರಗಿ ಭೀಮರಾವ್ ವೃತ್ತದಲ್ಲಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಸ್ವದೇಶಿ ವಸ್ತುಗಳನ್ನು ಬಳಸಿ ಭಾರತವನ್ನು ಅಭಿವೃದ್ಧಿ ಪಡಿಸೋಣ. ಎಲ್ಲರೂ ಒಟ್ಟಾಗಿ ಸ್ವದೇಶೀ ವಸ್ತುಗಳನ್ನು ಬಳಸಿ, ಆರ್ಥಿಕತೆಯ ಭೂಪಟದಿಂದ ಚೀನಾ ಅಳಿಸಿ ಎಂದು ಘೋಷಣೆ ಕೂಗಿದರು.
ಇಂದಿನಿಂದಲೇ ಚೀನಾದ ಪ್ರತಿಷ್ಠಿತ ಟಿಕ್ ಟಾಕ್, ಪ್ರಿಜ್, ಬಟ್ಟೆ, ಟಿವಿ ಮೊಬೈಲ್, ದಿನಸಿ ಹೀಗೆ ಅನೇಕ ವಸ್ತುಗಳನ್ನು ತ್ಯಜಿಸುವ ಮೂಲಕ ಮೃತ ಯೋಧರ ಆತ್ಮಕ್ಕೆ ಶಾಂತಿ ಕೋರೋಣ ಎಂದು ಘೋಷಣೆಯನ್ನು ಕೂಗಿದರು.