ಗದಗ: ಎಮ್ಮೆಯ ಮೈ ತೊಳೆಯಲು ಹೋಗಿದ್ದ ಸಹೋದರರಿಬ್ಬರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಕಳಸಾಪುರದಲ್ಲಿ ಗ್ರಾಮದಲ್ಲಿ ನಡೆದಿದೆ.
ಎಮ್ಮೆ ತೊಳೆಯಲು ಹೋದ ಸಹೋದರರು ನೀರು ಪಾಲು - ಗದಗ ಕಳಸಾಪುರ ಸಹೋದರರ ಸಾವು
ಎಮ್ಮೆಗಳ ಮೈ ತೊಳೆಯಲೆಂದು ಕೃಷಿ ಹೊಂಡಕ್ಕೆ ಹೋಗಿದ್ದ ಸಹೋದರಿಬ್ಬರು ಮುಳುಗಿ ಸಾವನ್ನಪ್ಪಿದ ಘಟನೆ ಕಳಸಾಪುರ ಗ್ರಾಮದ ಹೊಲವೊಂದರಲ್ಲಿ ನಡೆದಿದೆ.
![ಎಮ್ಮೆ ತೊಳೆಯಲು ಹೋದ ಸಹೋದರರು ನೀರು ಪಾಲು kalasapura-youg-brother-died](https://etvbharatimages.akamaized.net/etvbharat/prod-images/768-512-5395009-thumbnail-3x2-dead.jpg)
ಗದಗ ಕಳಸಾಪುರ ಸಹೋದರರ ಸಾವು
ಲಕ್ಷ್ಮಣ್(18), ಹಾಗೂ ವಿಕಾಸ್(11) ಮೃತ ಸಹೋದರರು. ಎಮ್ಮೆಗಳ ಮೈ ತೊಳೆಯಲೆಂದು ಗ್ರಾಮದ ಹೊಲವೊಂದರ ಕೃಷಿ ಹೊಂಡಕ್ಕೆ ಹೋಗಿದ್ದಾಗ ಈ ಅಪಘಾತ ಸಂಭವಿಸಿದೆ. ಈ ಸಂದರ್ಭದಲ್ಲಿ ಮೊದಲು ನೀರಿಗಿಳಿದಿದ್ದ ಸಹೋದರ ಮುಳುಗುತ್ತಿದ್ದುದನ್ನು ಕಂಡು ಇನ್ನೋರ್ವ ಬಾಲಕ ಕಾಪಾಡಲು ಮುಂದಾಗಿದ್ದ. ಈ ವೇಳೇ ಇಬ್ಬರು ಸಾವನ್ನಪ್ಪಿದ್ದಾರೆ.
ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Dec 16, 2019, 10:45 PM IST