ಗದಗ: ಮಾಹಾಮಾರಿ ಕೊರೊನಾ ವೈರಸ್ ಹಿನ್ನೆಲೆ ಜನರಿಗೆ ಅರಿವು ಮೂಡಿಸಲು ನ್ಯಾಯಾಧೀಶರು ಫೀಲ್ಡಿಗಿಳಿದಿದ್ದಾರೆ.
ಕೊರೊನಾ ಜಾಗೃತಿಗೆ ಫೀಲ್ಡಿಗಿಳಿದ ನ್ಯಾಯಾಧೀಶರು - corona latest news
ಗದಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ ಎಸ್ ಸಂಗ್ರೇಶಿ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಸ್ ಜಿ ಸಲಗರೆ ಇನ್ನು ಹಲವರು ಸೇರಿ ಗದಗ ನಗರದಲ್ಲಿ ಸಂಚರಿಸಿ ಲಾಕ್ ಡೌನ್ ಪಾಲನೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಗದಗ ನಗರದ ತರಕಾರಿ, ಕಿರಾಣಿ ಮಾರ್ಕೆಟ್ ಗಳಲ್ಲಿ ಜನಜಂಗುಳಿ ಹೆಚ್ಚಾದ ಹಿನ್ನೆಲೆಯಲ್ಲಿ ಗದಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ ಎಸ್ ಸಂಗ್ರೇಶಿ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಸ್ ಜಿ ಸಲಗರೆ ಇನ್ನು ಹಲವರು ಸೇರಿ ಗದಗ ನಗರದಲ್ಲಿ ಸಂಚರಿಸಿ ಲಾಕ್ ಡೌನ್ ಪಾಲನೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಗದಗ ನಗರದ ಗ್ರೇನ್ ಮಾರ್ಕೆಟ್, ಕಿರಾಣಿ ಮಾರ್ಕೆಟ್ ನಲ್ಲಿ ಸಂಚರಿಸಿ ಲಾಕ್ ಡೌನ್ ಉಲ್ಲಂಘನೆ ಮಾಡಿದ ವ್ಯಾಪಾರಸ್ಥರು, ಗ್ರಾಹರಿಗೆ ಎಚ್ಚರಿಕೆ ನೀಡ್ತಿದ್ದಾರೆ. ಲಾಕ್ ಡೌನ್ ಉಲ್ಲಂಘನೆ ಮಾಡಿದ್ರೆ ಕೇಸ್ ಹಾಕಬೇಕಾಗುತ್ತದೆ ಅಂತ ಎಚ್ಚರಿಕೆ ಮೂಡಿಸುತ್ತಿದ್ದಾರೆ. ಗದಗ ನಗರದಲ್ಲಿ ಜನರು ನಿರಂತರವಾಗಿ ಲಾಕ್ ಡೌನ್ ಉಲ್ಲಂಘನೆ ಮಾಡ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಜಾಗೃತಿ ಜೊತೆಗೆ ಎಚ್ಚರಿಕೆ ಸಹ ನೀಡಿದ್ದಾರೆ.