ಗದಗ :ಪಾಶ್ವವಾಯು ಹಾಗೂ ಅನಾರೋಗ್ಯದ ಕಾರಣದಿಂದಾಗಿ ಆಸ್ಪತ್ರಗೆ ದಾಖಲಾಗಿದ್ದ ವೃದ್ಧೆ ಕೊರೊನಾದಿಂದಾಗಿ ಸಾವನಪ್ಪಿದ್ದರು. ವೃದ್ಧೆಯ ತಿಥಿ ಕಾರ್ಯ ಮುಗಿದ ಮಾರನೆ ದಿನ ಜಿಮ್ಸ್ ಸಿಬ್ಬಂದಿ ಶವ ತೆಗೆದುಕೊಂಡ ಬಂದ ಘಟನೆ ನಡೆದಿದೆ.
ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ 70 ವರ್ಷದ ವೃದ್ಧೆ ಪಾರ್ಶ್ವವಾಯು ಹಾಗೂ ಅನಾರೋಗ್ಯದ ಹಿನ್ನೆಲೆ ಜುಲೈ 15ರಂದು ಗದಗದ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಇವರಿಗೆ ಕೊರೊನಾ ಟೆಸ್ಟ್ ಮಾಡಿಸಲಾಗಿತ್ತು. ವರದಿಯಲ್ಲಿ ಪಾಸಿಟಿವ್ ಬಂದಿತ್ತು. ಇದಾದ ಬಳಿಕ ಜುಲೈ 20ರಂದು ವೃದ್ಧೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.