ಕರ್ನಾಟಕ

karnataka

ETV Bharat / state

ಇಂದು ಸಿಎಂ ಜೊತೆ ಮತ್ತೊಂದು ಸುತ್ತಿನ ಮಾತುಕತೆ ಸಾಧ್ಯತೆ ಇದೆ: ಜಯಮೃತ್ಯುಂಜಯ ಶ್ರೀ

ಇವತ್ತು ಸಿಎಂ ಗದಗ ನಗರಕ್ಕೆ ಆಗಮಿಸುತ್ತಿದ್ದಾರೆ. ನಾವು ಗದಗದಲ್ಲೇ ಇದ್ದೇವೆ. ಇವತ್ತು ಮಾತುಕತೆ ಆದರೆ ಒಳ್ಳೆಯದು ಎಂದು ಶ್ರೀಗಳು ಹೇಳಿದ್ದಾರೆ.

ಗದಗನಲ್ಲಿ ಜಯಮೃತ್ಯುಂಜಯ ಶ್ರೀ ಹೇಳಿಕೆ
ಗದಗನಲ್ಲಿ ಜಯಮೃತ್ಯುಂಜಯ ಶ್ರೀ ಹೇಳಿಕೆ

By

Published : Sep 26, 2021, 5:12 PM IST

ಗದಗ: ಅಕ್ಟೋಬರ್ 1 ರಂದು ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ಸತ್ಯಾಗ್ರಹ ಹಿನ್ನೆಲೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಜೊತೆಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಯುವ ಸಾಧ್ಯತೆ ಇದೆ ಎಂದು ಜಯಮೃತ್ಯುಂಜಯ ಶ್ರೀಗಳು ಹೇಳಿದ್ದಾರೆ.

ಗದಗನಲ್ಲಿ ಜಯಮೃತ್ಯುಂಜಯ ಶ್ರೀ ಹೇಳಿಕೆ

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇವತ್ತು ಸಿಎಂ ಗದಗ ನಗರಕ್ಕೆ ಆಗಮಿಸುತ್ತಿದ್ದಾರೆ. ನಾವು ಗದಗನಲ್ಲೇ ಇದ್ದೇವೆ. ಇವತ್ತು ಮಾತುಕತೆ ಆದರೆ ಒಳ್ಳೆಯದು. ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಕೂಡಾ ಇದ್ದಾರೆ‌. ಸಚಿವ ಸಿ.ಸಿ ಪಾಟೀಲ್ ನಮ್ಮ ಹಾಗೂ ಸರ್ಕಾರದ ನಡುವೆ ಸಂಧಾನ‌ ಕಾರ್ಯ ನಡೆಸಿದ್ದಾರೆ ಎಂದರು.

ಸಿಎಂ ಮಾತಿನ ಮೇಲೆ ನಮಗೆ ಭರವಸೆ ಮೂಡಿದೆ. ಉಳಿದ ರಾಜಕಾರಣಿಗಳ ಮೇಲೆ ವಿಶ್ವಾಸವಿಲ್ಲ. ಮಾತುಕತೆ ನಂತರ ಹೋರಾಟದ ನಿರ್ಧಾರ ಮಾಡುತ್ತೇವೆ ಎಂದರು.

ವೀರಶೈವ ಲಿಂಗಾಯತ ಸಮಾಜಕ್ಕೆ ಮೀಸಲಾತಿ ನೀಡಬೇಕು ಎಂಬ ನಿರಾಣಿ ಹೇಳಿಕೆ ವಿಚಾರವಾಗಿ ತಿರುಗೇಟು ನೀಡಿದ ಶ್ರೀಗಳು, ನಿರಾಣಿಗೇನು ಗೊತ್ತು? ನಿರಾಣಿ ಹೇಳುವ ಮುಂಚೆ ನಾವು ಹೇಳಿದ್ದೇವೆ. ಪಂಚಮಸಾಲಿ ಲಿಂಗಾಯತ ಜೊತೆ ಎಲ್ಲಾ ಲಿಂಗಾಯತರಿಗೆ ಮೀಸಲಾತಿ ನೀಡಬೇಕು ಅನ್ನೋದು ನಮ್ಮ ಅಭಿಪ್ರಾಯ ಎಂದು ಹೇಳಿದರು.

ABOUT THE AUTHOR

...view details