ಗದಗ: ಕೊರೊನಾ ವೈರಸ್ ಹರಡುವ ಭೀತಿ ಹಿನ್ನಲೆಯಲ್ಲಿ ಜನತಾ ಕರ್ಫ್ಯೂಗೆ ಜಿಲ್ಲೆಯ ಜನತೆ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಮನವಿ ಮಾಡಿಕೊಂಡಿದ್ದಾರೆ.
ಮುದ್ರಣ ಕಾಶಿ ಗದಗ ಸಂಪೂರ್ಣ ಸ್ತಬ್ಧ: ಜನತಾ ಕರ್ಫ್ಯೂ ಹಿನ್ನೆಲೆ ರಸ್ತೆಗಿಳಿಯದಂತೆ ಡಿಸಿ ಮನವಿ - DC M,G hiremath
ಜನತಾ ಕರ್ಫ್ಯೂಗೆ ಗದಗ ಜಿಲ್ಲೆಯ ಜನತೆ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಮನವಿ ಮಾಡಿಕೊಂಡಿದ್ದಾರೆ.
ಜಿಲ್ಲಾಡಳಿತ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಮನವಿಗೆ ಸ್ಪಂದಿಸಬೇಕಾಗಿದ್ದು, ಇದು ಕೊರೊನಾ ವೈರಸ್ ತಡೆಯಲು ಒಂದು ಕ್ರಮವಾಗಿದೆ. ಹೀಗಾಗಿ ಜನರು ಸ್ವಯಂ ಪ್ರೇರಿತವಾಗಿ ಕರ್ಫ್ಯೂನಲ್ಲಿ ಭಾಗಿಯಾಗಬೇಕೆಂದರು. ಈಗಾಗಲೇ ಜಿಲ್ಲೆಯಲ್ಲಿ ಮಾರ್ಚ್ 31 ರವರೆಗೆ 144 ಕಲಂ ಅಡಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಜಿಲ್ಲೆಯಲ್ಲಿ ಜಾತ್ರೆ, ಉತ್ಸವ, ಸಂತೆ, ಸೇರಿದಂತೆ ಮಾರುಕಟ್ಟೆ ಬಂದ್ ಮಾಡಲಾಗಿದೆ.
ಇನ್ನು ಔಷಧಿ ಅಂಗಡಿಗಳು, ವೈದ್ಯಕೀಯ ಸೇವೆ, ಅಗತ್ಯ ಆಹಾರ ಪದಾರ್ಥಗಳನ್ನು ನೀಡುವ ಅಂಗಡಿಗಳಿಗೆ ನಿಷೇಧವಿಲ್ಲ ಎಂದು ಅವರು ಸ್ಪಷ್ಟ ಪಡಿಸಿದರು.