ಗದಗ: ವಿಧಾನಸಭೆ ಮತ್ತು ವಿಧಾನ ಪರಿಷತ್ ಅಧಿವೇಶನದಂತೆಯೇ ಗದಗ ಮತ ಕ್ಷೇತ್ರದಲ್ಲಿ ಜನತಾ ಸದನ ನಡೆಸಲಾಗುತ್ತಿದೆ ಎಂದು ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಹೇಳಿದರು. ನಗರದ ಪತ್ರಿಕಾಭವನದಲ್ಲಿ ನಿನ್ನೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಜನತಾ ಸದನವು ಪ್ರತಿ ತಿಂಗಳು ನಾಲ್ಕನೇ ಶನಿವಾರ ಮತ್ತು ಭಾನುವಾರ ನಡೆಯಲಿದೆ. ಒಂದು ದಿನ ಹಳ್ಳಿ ಮತ್ತೊಂದು ದಿನ ನಗರ ಪ್ರದೇಶದಲ್ಲಿ ಜರುಗಲಿದೆ. ಜನತಾ ಸದನ ಉದ್ಘಾಟನಾ ಕಾರ್ಯಕ್ರಮ ಜೂನ್ 10 ರಂದು ನಡೆಯಲಿದ್ದು, ಸದಸನದಲ್ಲಿ ಮಾಜಿ ಸಚಿವ ಸಿಸಿ ಪಾಟೀಲ್ ಭಾಗಿಯಾಗಲಿದ್ದಾರೆ" ಅಂತಾ ತಿಳಿಸಿದ್ರು.
ಇದನ್ನೂ ಓದಿ :ಕಾಂಗ್ರೆಸ್ ತೊರೆದು ಕಮಲ ಮುಡಿದ ಕಾರ್ಯಕರ್ತರು.. ಬಿಜೆಪಿಪರ ಅನಿಲ್ ಮೆಣಸಿನಕಾಯಿ ಭರ್ಜರಿ ಪ್ರಚಾರ
"ಈ ಸದನದಲ್ಲಿ ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಬಹುದು. ಈ ವೇಳೆ, ಸಾರ್ವಜನಿಕರು ತಮ್ಮ ಗ್ರಾಮ ಹಾಗೂ ಕಾಲನಿಗಳಲ್ಲಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲು ಮುಕ್ತ ಅವಕಾಶ ಇದೆ. ಸರ್ಕಾರದಲ್ಲಿ ನೇಮಿಸಿರುವಂತೆ ಪ್ರತಿ ಇಲಾಖೆಗೆ ಇಬ್ಬರಂತೆ 26 ಇಲಾಖೆಗಳಿಗೆ ಜನತಾ ಸದನದಲ್ಲಿ ಸಚಿವರನ್ನ ನೇಮಕ ಮಾಡಲಾಗುತ್ತದೆ. ಗ್ರಾಮೀಣ ಹಾಗೂ ಶಹರ ಪ್ರದೇಶಗಳಿಗೆ ಪ್ರತ್ಯೇಕ ಜನತಾ ಸಚಿವರನ್ನು ನೇಮಕಗೊಳಿಸಲಾಗುತ್ತದೆ. ಅಲ್ಲದೇ, ಪ್ರತಿ ವಾರ್ಡ್ ಮತ್ತು ಹಳ್ಳಿಗಳಿಂದ ಇಬ್ಬರು ಪ್ರಮುಖರನ್ನು ನೇಮಕಗೊಳಿಸಲಾಗುತ್ತದೆ" ಎಂದು ತಿಳಿಸಿದರು.
ಇದನ್ನೂ ಓದಿ :ಹೆಚ್ ಕೆ ಪಾಟೀಲ್ ಸ್ಟಂಟ್ ಮಾಸ್ಟರ್.. ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ವಾಗ್ದಾಳಿ