ಗದಗ :ಜಿಂದಾಲ್ ಕಂಪನಿಗೆ ಜಮೀನು ನೀಡುವ ವಿಚಾರವಾಗಿ ಮಾಜಿ ಮುಖ್ಯಮುಂತ್ರಿ ಹಾಗೂ ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ಹೊಸ ಬಾಂಬ್ ಸಿಡಿಸಿದ್ದಾರೆ. ಜಿಂದಾಲ್ ಕಂಪನಿ ಹಾಗೂ ದೋಸ್ತಿ ಸರ್ಕಾರದ ನಡುವೆ ಭಾರಿ ಡೀಲ್ ನಡೆದಿದೆ ಅಂತಾ ಹೊಸದೊಂದು ಬಾಂಬ್ ಸಿಡಿಸಿದ್ದಾರೆ.
ಇರೋವರೆಗೂ ಎಷ್ಟಾಗುತ್ತೋ ಅಷ್ಟು ಡೀಲ್ ಮಾಡ್ಬೇಕಂತಿದೆ ಮೈತ್ರಿ ಸರ್ಕಾರ.. ಜಗದೀಶ್ ಶೆಟ್ಟರ್ ವಾಗ್ದಾಳಿ - kannada news
ಸರ್ಕಾರ ಯಾವ ಕ್ಷಣದಲ್ಲಿ ಏನು ಆಗುತ್ತೋ ಗೊತ್ತಿಲ್ಲ. ಹೀಗಾಗಿ ಎಷ್ಟು ಆಗುತ್ತೋ ಅಷ್ಟು ಡೀಲ್ ಮಾಡಲು ಮೈತ್ರಿ ನಾಯಕರು ಹೊರಟಿದ್ದಾರೆ ಅಂತಾ ಬಿಜೆಪಿ ಶಾಸಕ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.
ಗದಗ ನಗರದಲ್ಲಿ ಬಿಜೆಪಿ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮದವರೊಂದಿಗೆ ಮಾತನಾಡಿರುವ ಶೆಟ್ಟರ್, ಸರ್ಕಾರ ಯಾವ ಕ್ಷಣದಲ್ಲಿ ಏನು ಆಗುತ್ತೋ ಗೊತ್ತಿಲ್ಲ. ಹೀಗಾಗಿ ಎಷ್ಟು ಆಗುತ್ತೋ ಅಷ್ಟು ಡೀಲ್ ಮಾಡಿಕೊಂಡು ಹೊರಟಿದ್ದಾರೆ ಅಂತಾ ಮೈತ್ರಿ ಸರ್ಕಾರ ಹಾಗೂ ಜಿಂದಾಲ್ ಕಂಪನಿ ನಡುವೆ ಹೊಸ ಟ್ವಿಸ್ಟ್ ಒಂದನ್ನ ಕೊಟ್ಟಿದ್ದಾರೆ.
ಜಮೀನು ಬೆಲೆ ಎಕರೆಗೆ 10 ಲಕ್ಷ ಕಡಿಮೆ ಸಿಗಲ್ಲ. ಆದರೆ, ಪ್ರತಿ ಎಕರೆಗೆ 1.22 ಲಕ್ಷನಂತೆ ಮಾರಾಟ ಮಾಡಿದ್ದಾರೆ. ಎಷ್ಟು ಡೀಲ್ ನಡೆದಿದೆ ಅಂತಾ ಬರುವ ದಿನಗಳಲ್ಲಿ ಗೊತ್ತಾಗುತ್ತೆ. ದೋಸ್ತಿ ಸರ್ಕಾರದ ಪ್ರಮುಖರು ಜಿಂದಾಲ್ ಕಂಪನಿ ಜೊತೆ ಡೀಲ್ ಮಾಡಿಕೊಂಡಿದ್ದಾರೆ. ಹೀಗಾಗಿ ಸಚಿವ ಸಂಪುಟದಲ್ಲಿ ಅಂಗೀಕಾರ ನೀಡಿದ್ದಾರೆ ಅಂತಾ ಮೈತ್ರಿ ಸರ್ಕಾರದ ವಿರುದ್ಧ ಜಗದೀಶ್ ಶೆಟ್ಟರ್ ದೊಡ್ಡ ಆರೋಪ ಮಾಡಿದ್ದಾರೆ.ಸರ್ಕಾರ ಇರೋವೆರೆಗೆ ಎಷ್ಟಾಗುತ್ತೋ ಅಷ್ಟು ಡೀಲ್ ಮಾಡುತ್ತಿದ್ದಾರೆ ಎಂದಿರುವ ಶೆಟ್ಟರ್ ಇದೊಂದು ಡೀಲ್ ಸರ್ಕಾರ ಅಂತಾ ವಾಗ್ದಾಳಿ ನಡೆಸಿದ್ದಾರೆ.