ಕರ್ನಾಟಕ

karnataka

ETV Bharat / state

ಗದಗ ಕೊರೊನಾ ಪಾಸಿಟಿವ್ ಪ್ರಕರಣಕ್ಕೆ ಇದೆಯಾ ದೆಹಲಿ ನಂಟು? - is the connection of delhi to gadag corona case

ಏಪ್ರಿಲ್​ 7ರಂದು ಜಿಲ್ಲೆಯಲ್ಲಿ ಮೊದಲ ಕೊರೊನಾ ಪ್ರಕರಣ ದೃಢಪಟ್ಟಿತ್ತು. ವೃದ್ಧೆಯ ಸಂಪರ್ಕದಲ್ಲಿದ್ದ ಜನರು ಮತ್ತು ಚಿಕಿತ್ಸೆ ನೀಡಿದ ವೈದ್ಯರು, ಸಿಬ್ಬಂದಿ ಸೇರಿದಂತೆ ಈವರೆಗೆ ಒಟ್ಟು 66 ಜನರ ಮಾದರಿಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ.

is the connection of delhi to gadag corona case
ಗದಗ ಕೊರೊನಾ ಪಾಸಿಟಿವ್ ಪ್ರಕರಣಕ್ಕೆ ಇದೆಯಾ ದೆಹಲಿ ನಂಟು..?

By

Published : Apr 11, 2020, 10:39 PM IST

ಗದಗ: ಜಿಲ್ಲೆಯಲ್ಲಿ ವೃದ್ಧೆಗೆ ದೃಢಪಟ್ಟ ಮೊದಲ ಕೊರೊನಾ ಪ್ರಕರಣಕ್ಕೆ ಈಗ ದೆಹಲಿ ನಂಟು ಇರುವ ಶಂಕೆ ವ್ಯಕ್ತವಾಗಿದ್ದು, ಶಂಕಿತರ ಪತ್ತೆಗಾಗಿ ವ್ಯಾಪಕ ಹುಡುಕಾಟ ಆರಂಭವಾಗಿದೆ.

ದೆಹಲಿಯ ನಿಜಾಮುದ್ದೀನ್​​ ಕಾರ್ಯಕ್ರಮದಲ್ಲಿ ಜಿಲ್ಲೆಯ 13 ಜನ ಭಾಗವಹಿಸಿದ್ದರು ಎನ್ನಲಾಗಿತ್ತು. ಆದರೆ ಆ ಸಂಖ್ಯೆ ಇನ್ನೂ ಹೆಚ್ಚಿದ್ದು, ಅದರಲ್ಲಿ ಕೆಲವರು ತಲೆಮರೆಸಿಕೊಂಡಿದ್ದಾರೆ. ಅವರೆಲ್ಲರೂ ಕಂಟೈನ್‍ಮೆಂಟ್ ಮಾಡಿರುವ ಪ್ರದೇಶದ ನಿವಾಸಿಗಳು ಎನ್ನುವ ಅನುಮಾನ ಸದ್ಯ ವ್ಯಕ್ತವಾಗಿದೆ.

ಅನುಮಾನಕ್ಕೆ ಪ್ರಮುಖ ಕಾರಣ ಎನು?

ಏಪ್ರಿಲ್​ 7ರಂದು ಜಿಲ್ಲೆಯಲ್ಲಿ ಮೊದಲ ಕೊರೊನಾ ಪ್ರಕರಣ ದೃಢಪಟ್ಟಿತ್ತು. 80 ವರ್ಷದ ವೃದ್ಧೆಗೆ ಸೋಂಕು ಇರುವುದು ಖಚಿತವಾಗಿತ್ತು. ವೃದ್ಧೆಯ ಸಂಪರ್ಕದಲ್ಲಿದ್ದ ಜನರು ಮತ್ತು ಚಿಕಿತ್ಸೆ ನೀಡಿದ ವೈದ್ಯರು, ಸಿಬ್ಬಂದಿ ಸೇರಿದಂತೆ ಈವರೆಗೆ ಒಟ್ಟು 66 ಜನರ ಮಾದರಿಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಅವರೆಲ್ಲರ ವರದಿಗಳು ನಕಾರಾತ್ಮಕವಾಗಿವೆ. ಮುಖ್ಯವಾಗಿ ವೃದ್ಧೆಯ ಸಂಪರ್ಕದಲ್ಲಿದ್ದ ಗೋವಾಕ್ಕೆ ಹೋಗಿ ಬಂದವರು, ಕೇರಳದಿಂದ ಬಂದ ಮೊಮ್ಮಗನ ವರದಿಯೂ ನಕಾರಾತ್ಮಕವಾಗಿ ಬಂದಿದೆ. ಹಾಗಿದ್ದರೆ ವೃದ್ಧೆಗೆ ಕೊರೊನಾ ಬಂದಿದ್ದಾದರೂ ಹೇಗೆ ಎನ್ನುವ ಪ್ರಶ್ನೆಗೆ ಈಗ ಉತ್ತರ ಹುಡುಕುವ ಪ್ರಯತ್ನ ನಡೆದಿದೆ. ದೆಹಲಿ ಮಸೀದಿಗೆ ಹೋಗಿ ಬಂದವರಿಂದಲೇ ಸೋಂಕು ಹರಡಿರಬಹುದು ಎನ್ನುವ ಅನುಮಾನಗಳನ್ನು ಕಂಟೈನ್​ಮೆಂಟ್ ಪ್ರದೇಶದ ಜನರೇ ವ್ಯಕ್ತಪಡಿಸುತ್ತಿದ್ದಾರೆ.

ಸಾಮಾನ್ಯ ಪ್ರಯಾಣಿಕರು ರೈಲ್ವೆ ಇಲಾಖೆ ಕಾಯ್ದಿರಿಸಿದ ಬೋಗಿಗಳಲ್ಲಿ ದೆಹಲಿಗೆ ಸಂಚರಿಸಿದ ಪ್ರಯಾಣಿಕರ ಮಾಹಿತಿ ಒದಗಿಸಿದೆ. ಆ ಪ್ರಕಾರ ಜಿಲ್ಲೆಯ 13 ಜನ ದೆಹಲಿ ಮಸೀದಿಗೆ ಹೋಗಿ ಬಂದವರು, ನಾಲ್ಕು ಜನ ಅನ್ಯ ಕಾರ್ಯ ನಿಮಿತ್ತ ದೆಹಲಿಗೆ ಹೋಗಿ ಬಂದಿದ್ದಾರೆ. ಅವರೆಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ. ಆದರೆ ದ್ವಿತೀಯ ದರ್ಜೆ ಬೋಗಿಗಳಲ್ಲಿ ದೆಹಲಿಗೆ ಹೋಗಿ ಬಂದವರ ಮಾಹಿತಿ ಲಭ್ಯವಾಗಿಲ್ಲ. ರೈಲ್ವೆ ಇಲಾಖೆ ಬಳಿಯೂ ಆ ಮಾಹಿತಿ ಇಲ್ಲ. ಹಾಗಾಗಿ ಅಂಥ ಪ್ರಯಾಣಿಕರಿಗಾಗಿ ಗದಗದಲ್ಲಿ ಶೋಧ ಆರಂಭವಾಗಿದೆ. ಹಾಗಾಗಿಯೇ ನಿನ್ನೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಯತೀಶ್ ಎನ್. ದೆಹಲಿಗೆ ಹೋಗಿ ಬಂದವರು ಬಂದು ಪರೀಕ್ಷೆ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ಅಂತವರ ವಿರುದ್ಧ ಪ್ರಕರಣ ದಾಖಲು ಮಾಡುತ್ತೇನೆ ಎಂದು ವಿಡಿಯೋವೊಂದನ್ನು ಹರಿಬಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ದೆಹಲಿಗೆ ಹೋಗಿ ಬಂದವರು ಎಲ್ಲಿ ಇದರಬಹುದು?

ಮೂಲಗಳ ಪ್ರಕಾರ, ದೆಹಲಿ ಮಸೀದಿಗೆ ಹೋಗಿ ಬಂದಿರುವ 13 ಜನರಲ್ಲದೇ ಇನ್ನೂ ನಾಲ್ವರು ಗದಗ ನಗರದಲ್ಲಿದ್ದಾರೆ. ಅದು ನಿರ್ಬಂಧಿತ ಪ್ರದೇಶ ಎಂದು ಘೋಷಣೆ ಮಾಡಿರುವ ರಂಗನವಾಡ ಗಲ್ಲಿ, ಎಸ್.ಎಂ. ಕೃಷ್ಣಾ ನಗರ, ಉರ್ದು ಶಾಲೆ ರಸ್ತೆಯಲ್ಲೇ ವಾಸವಾಗಿದ್ದಾರೆ ಎನ್ನುವ ಮಾಹಿತಿ ದಟ್ಟವಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೋಲಿಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ABOUT THE AUTHOR

...view details