ಕರ್ನಾಟಕ

karnataka

ETV Bharat / state

ಹೊರಗಡೆ ಬಂದರೆ ಇದೇ ನಿಮ್ಮ ಕೊನೆ ಬರ್ತಡೇ: ಕೇಕ್ ಕತ್ತರಿಸಿ ಪೊಲೀಸರಿಂದ ವಿನೂತನ ಜಾಗೃತಿ - Gadag Police

ಹೊರಗಡೆ ಬಂದರೆ ಇದು ನಿಮ್ಮ ಕೊನೆಯ ಬರ್ತಡೇ ಎಂದು ಕೇಕ್ ಕತ್ತರಿಸಿ ಗದಗ ಪೊಲೀಸರು ವಿನೂತನ ಜಾಗೃತಿ ಮೂಡಿಸಿದ್ದಾರೆ.

Innovative Awareness by Gadag Police
ಕೇಕ್ ಕತ್ತರಿಸಿ ಪೊಲೀಸರಿಂದ ವಿನೂತನ ಜಾಗೃತಿ

By

Published : May 14, 2021, 7:43 PM IST

ಗದಗ: ಲಾಕ್​ಡೌನ್​ ನಿಯಮ ಉಲ್ಲಂಘಿಸಿ ರಸ್ತೆಗೆ ಬರುತ್ತಿರುವ ಜನತೆಗೆ ಕೇಕ್ ಕಟ್ ಮಾಡಿಸಿ ವಿನೂತನವಾಗಿ ಕೊರೊನಾ ಜಾಗೃತಿ ಮೂಡಿಸುತ್ತಿದ್ದಾರೆ.

ಕೇಕ್ ಕತ್ತರಿಸಿ ಪೊಲೀಸರಿಂದ ವಿನೂತನ ಜಾಗೃತಿ

ಮಾಸ್ಕ್ ಸರಿಯಾಗಿ ಮೂಗಿನ ಮೇಲೆ ಹಾಕಿಕೊಳ್ಳಿ. ನಮ್ಮಲ್ಲೂ ಬೆಡ್ ಖಾಲಿ ಇಲ್ಲ ಅಂತಾ ಹೇಳ್ತಿರುವ ಯಮನ ಚಿತ್ರ. ಮನೆಯಲ್ಲಿದ್ದರೆ ಬಾಳು ಬಂಗಾರ. ಹೊರಗಡೆ ಬಂದರೆ ಮಸಣಕ್ಕೆ ಶೃಂಗಾರ ಅನ್ನೋ ಜಾಗೃತಿ ಕಾರ್ಡ್​ ಹಿಡಿದಿದ್ದಾರೆ. ಇದೆಲ್ಲದಕ್ಕಿಂತ ಡಿಫರೆಂಟಾಗಿ ಕೇಕ್ ಮೇಲೆ ಮನೆಯಲ್ಲಿರ್ತಿರೋ ಇಲ್ಲ. ಇದೇ ಕೊನೆಯ ಬರ್ತ್ ಡೇ ಎಂದು ಬರೆದು ಎಚ್ಚರಿಕೆ ಸಂದೇಶ ನೀಡುತ್ತಿದ್ದಾರೆ.

ಓದಿ:‘ಪಾಪದ ಹಣದಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿಲ್ಲ’: ಬಿಜೆಪಿ

ನಗರದ ಹಾತಲಗೇರಿ ನಾಕಾ ಬಳಿ ರಸ್ತೆಯಲ್ಲಿ ಓಡಾಡ್ತಿದ್ದ ಜನರನ್ನ ಹಿಡ್ಕೊಂಡು ಕೇಕ್ ಕಟ್ ಮಾಡ್ಸಿ, ಹೊರಗಡೆ ಬಂದ್ರೆ ಇದೇ ಕೊನೇ ಬರ್ತ್ ಡೇ ಅನ್ನೋ ಸಂದೇಶವನ್ನೂ ಸಾರಿದ್ದಾರೆ‌. ಬೈಕ್ ಸವಾರರಿಗೆ ಮನೆಯಲ್ಲೇ ಇರಿ. ಅನಗತ್ಯವಾಗಿ ಓಡಾಡ್ಬೇಡಿ ಎಂದು ಎಚ್ಚರಿಸಿದ್ದಾರೆ.

ABOUT THE AUTHOR

...view details