ಗದಗ:ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ನಾಲ್ವರು ವಿದೇಶಿಗರೂ ಸೇರಿ ಐವರಿಗೆ ಗಾಯಗಳಾಗಿರುವ ಘಟನೆ ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದ ಬಳಿ ನಡೆದಿದೆ.
ಕಾರುಗಳು ಮುಖಾಮುಖಿ: ವಿದೇಶಿಗರೂ ಸೇರಿ ಐವರಿಗೆ ಗಾಯ - ಇನ್ನೋವಾ-ಸ್ವಿಫ್ಟ್ ಮುಖಾಮುಖಿ
ಗೋವಾದಿಂದ ಹಂಪಿಗೆ ರಷ್ಯಾ ಮೂಲದ ವಿದೇಶಿ ಪ್ರವಾಸಿಗರು ಹೊರಟಿದ್ದ ಇನ್ನೋವಾ ಕಾರಿಗೆ ಮುಂಡರಗಿಯಿಂದ ಹುಬ್ಬಳ್ಳಿಗೆ ಹೊರಟಿದ್ದ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದ ಪರಿಣಾಮ ಐವರಿಗೆ ಗಾಯಗಳಾಗಿರುವ ಘಟನೆ ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದ ಬಳಿ ನಡೆದಿದೆ.
ಸ್ವಿಫ್ಟ್ ಹಾಗೂ ಇನ್ನೋವಾ ಕಾರು ಮುಖಾಮುಖಿ ಡಿಕ್ಕಿ
ಗೋವಾದಿಂದ ಹಂಪಿಗೆ ರಷ್ಯಾ ಮೂಲದ ವಿದೇಶಿ ಪ್ರವಾಸಿಗರು ಹೊರಟಿದ್ದ ಇನ್ನೋವಾ ಕಾರಿಗೆ ಮುಂಡರಗಿಯಿಂದ ಹುಬ್ಬಳ್ಳಿಗೆ ಹೊರಟಿದ್ದ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ನತಾಲಿಯ ಎನ್ನೋ ಎಂಬ ಹೆಸರಿನ ಇಬ್ಬರು, ಈಗರ್, ಎಕರಿನಾ ಹಾಗೂ ಡಿಮಿಟ್ರಿ ಎಂಬವರಿಗೆ ಗಾಯಗಳಾಗಿದ್ದು, ಇವರನ್ನು ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆ ನೀಡಲಾಗ್ತಿದೆ.
ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.