ಗಜೇಂದ್ರಗಡ:ಸುಮಾರು ಎರಡು ದಶಕಗಳ ನಂತರ ಗಜೇಂದ್ರಗಡ ಭಾಗದಲ್ಲಿ ಉದ್ದ ಕೊಕ್ಕಿನ ರಣಹದ್ದು ಕಾಣಿಸಿಕೊಂಡಿದೆ.
ಗಜೇಂದ್ರಗಡ ಬೆಟ್ಟದಲ್ಲಿ ಅಳಿವಿನಂಚಿನಲ್ಲಿರುವ ರಣಹದ್ದು ಪತ್ತೆ! - Indian Long Billed Vulture discovered,
ಉತ್ತರ ಕರ್ನಾಟಕ ಭಾಗದಲ್ಲಿ ಬಹುತೇಕ ಅಳಿವಿನ ಅಂಚಿನಲ್ಲಿರುವ ರಣಹದ್ದುಗಳು ಗಜೇಂದ್ರಗಡ ಬೆಟ್ಟದಲ್ಲಿ ಕಾಣಿಸಿಕೊಂಡಿದ್ದು, ಪಕ್ಷಿಪ್ರಿಯರಲ್ಲಿ ಸಂಭ್ರಮ ಮನೆ ಮಾಡಿದೆ.

ಸಾಂದರ್ಭಿಕ ಚಿತ್ರ
ತೋಳ, ಕತ್ತೆ ಕಿರುಬ (ಹೈನಾ) ಪ್ರಾಣಿಗಳು ವಿಜ್ಞಾನಿಗಳಿಗೆ ಹಾಗೂ ಸಂಶೋಧಕರಿಗೆ ಕಂಡುಬಂದಿದೆ. ರೋಣದ ಜೀವವೈವಿಧ್ಯ ಸಂಶೋಧಕ ಮಂಜುನಾಥ ನಾಯಕ, ಜಯಪ್ರಕಾಶ ಬಳಗನೂರ ಸೇರಿದಂತೆ ಕುವೆಂಪು ವಿವಿ ಸಂಶೋಧನಾ ವಿಧ್ಯಾರ್ಥಿಗಳು ಮತ್ತು ಶಿರಸಿ ಅರಣ್ಯ ಕಾಲೇಜಿನ ವಿದ್ಯಾರ್ಥಿಗಳು ಗಜೇಂದ್ರಗಡ ಬೆಟ್ಟದಲ್ಲಿ ಮೂರು ದಿನಗಳ ಕಾಲ ಅಧ್ಯಯನ ನಡೆಸಿದರು.
ಸಂಶೋಧನಾ ವಿದ್ಯಾರ್ಥಿಗಳು ರಣಹದ್ದುಗಳ ಇರುವಿಕೆಯನ್ನು ಪತ್ತೆ ಹಚ್ಚಿದ್ದಾರೆ. ಅಲ್ಲದೇ ಗುಡ್ಡದ ವಿವಿಧ ಭಾಗದಲ್ಲಿ ರಣಹದ್ದುಗಳು ಗೂಡುಗಳನ್ನು ಕಟ್ಟಿರುವುದನ್ನು ದಾಖಲಿಸಿಕೊಂಡಿದ್ದಾರೆ. ರಣಹದ್ದುಗಳು ಮಾತ್ರವಲ್ಲದೆ ಇನ್ನಿತರ ಪಕ್ಷಿಗಳನ್ನು ಗುರುತಿಸಿದ್ದಾರೆ.