ಗದಗ: ಇಂದು ಮತ್ತೆ ಐದು ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 17ಕ್ಕೇರಿದೆ. ಕಂಟೇನ್ಮೆಂಟ್ (ನಿಷೇಧಿತ) ವಲಯದಲ್ಲಿ ಓಡಾಡಿದವರಿಗೂ ಸೋಂಕು ತಗುಲಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.
- ರೋಗಿ-1178: 30 ವರ್ಷ
- ರೋಗಿ-1179: 33 ವರ್ಷ
- ರೋಗಿ-1180: 58 ವರ್ಷ
- ರೋಗಿ-1181: 32 ವರ್ಷ
- ರೋಗಿ-1182: 12 ವರ್ಷದ ಬಾಲಕ
ರೋಗಿ-1178 ತಮಿಳುನಾಡಿನ ಚೆನ್ನೈನಿಂದ ಬಂದಿದ್ದರು. ಈತನನ್ನು ಶಿರಹಟ್ಟಿ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ರೋಗಿ-1179, ರೋಗಿ-1180 ಅವರಿಗೆ ರೋಗಿ-913ರ (65 ವರ್ಷದ ವೃದ್ಧ) ಸಂಪರ್ಕದಿಂದ ಸೋಂಕು ತಗುಲಿದೆ.
ರೋಗಿ-1181, ರೋಗಿ-1182 ಅವರಿಗೆ ಗಂಜಿ ಬಸವೇಶ್ವರ ಓಣಿಯ ಕಂಟೇನ್ಮೆಂಟ್ ವಲಯದಲ್ಲಿ ಸೋಂಕು ತಗುಲಿದೆ. ಎಲ್ಲರಿಗೂ ಜಿಮ್ಸ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಈವರೆಗೂ ಪತ್ತೆಯಾದ 17 ಪ್ರಕರಣಗಳಲ್ಲಿ ಐವರು ಗುಣಮುಖರಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. 11 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.