ಕರ್ನಾಟಕ

karnataka

ETV Bharat / state

ಯಾವ ಪುರುಷಾರ್ಥಕ್ಕೆ ಅರ್ಧ ದಿನ ಲಾಕ್‌ಡೌನ್‌ ಅಂತಾ ಪ್ರಶ್ನಿಸ್ತಿದ್ದಾರೆ ಗದಗ ಜನ - ಗದಗ ಸುದ್ದಿ

ತರಕಾರಿ‌ ಮಾರ್ಕೇಟ್ ಬಳಿ ಟ್ರಾಫಿಕ್ ಜಾಮ್‌ ಉಂಟಾಗಿ ಕೆಲಹೊತ್ತು ಪರಿಸ್ಥಿತಿ ಬಿಗಡಾಯಿಸಿತ್ತು. ಬಳಿಕ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಎಂಟ್ರಿ ಕೊಟ್ಟು ಲಾಠಿ ಎತ್ತಿದ ಬಳಿಕ ಪರಿಸ್ಥಿತಿ ಹತೋಟಿಗೆ ಬಂತು. ಹೀಗಾಗಿ ಈ ಅರ್ಧ ದಿನದ ಲಾಕ್​ಡೌನ್ ಮಾಡಿರೋ ಉದ್ದೇಶವಾದ್ರೂ ಏನು ಅನ್ನೋದು ಜನ ಸಾಮಾನ್ಯರ ಪ್ರಶ್ನೆ..

gadag lockdown news
ಗದಗ ಲಾಕ್​ಡೌನ್

By

Published : Jul 20, 2020, 7:25 PM IST

ಗದಗ :ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ತಂದಿರೋ ಅರ್ಧ ದಿನದ ಲಾಕ್​ಡೌನ್​ನಿಂದ ಕೊರೊನಾ ಕಂಟ್ರೋಲ್ ಅಂತೂ ಆಗ್ತಿಲ್ಲ ಅನ್ನೋದು ಜನಾಭಿಪ್ರಾಯ. ಸೋಂಕಿತರ ಸಂಖ್ಯೆ ಸದ್ಯ 585ಕ್ಕೆ ಏರಿಕೆಯಾಗಿದೆ.

ಪ್ರತಿ ದಿನ 50, 60, 80 ಕೊರೊನಾ ಪಾಸಿಟಿವ್​ ಪ್ರಕರಣ ವರದಿಯಾಗ್ತಿವೆ. ಹೀಗಾಗಿ ಜಿಲ್ಲಾಡಳಿತ ಕೊರೊನಾ ನಿಯಂತ್ರಣಕ್ಕೆ ಅರ್ಧ ದಿನ ಲಾಕ್​ಡೌನ್ ಜಾರಿ ಮಾಡಿದೆ. ಆದರೆ, ಸೋಂಕಿತರು ಮತ್ತೆ ಹೆಚ್ಚಾಗುತ್ತಿದ್ದಾರೆಯೇ ಹೊರತು ಕಡಿಮೆಯಾಗುತ್ತಿಲ್ಲ. ಹೀಗಾಗಿ ಜಿಲ್ಲಾಡಳಿತ ಮಾಡಿರೋ ಈ ಅರ್ಧ ದಿನದ ಲಾಕ್​​ಡೌನ್ ನಿಯಮ ನಿಜಕ್ಕೂ ಯಶಸ್ವಿಯಾಗಿದೆಯಾ ಅನ್ನೋ ಪ್ರಶ್ನೆ ಮೂಡ್ತಿದೆ.

ಬೆಳಗ್ಗೆ 5 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ವ್ಯಾಪಾರ, ವಹಿವಾಟು, ಸರಕು ಸಾಗಾಟ ಹಾಗೂ ಸಂಚಾರ ನಡೆಯುತ್ತಿದೆ. ನಂತರ ಎಲ್ಲಾ ಅಂಗಡಿ-ಮುಂಗಟ್ಟುಗಳು, ಜನ ಸಂಚಾರ ಸಂಪೂರ್ಣ ಬಂದ್ ಮಾಡಲಾಗುತ್ತೆ. ಇಂದು ಭೀಮನ ಅಮಾವಾಸ್ಯೆ ಇರುವುದರಿಂದ ಸಾಮಗ್ರಿಗಳ ಖರೀದಿಗೆ ಜನ ಕಿಕ್ಕಿರಿದು ತುಂಬಿದ್ದರು. ತರಕಾರಿ ಮಾರ್ಕೇಟ್, ಹಣ್ಣಿನ ಮಾರ್ಕೇಟ್, ಬಟ್ಟೆ ಅಂಗಡಿಗಳು ತುಂಬಿ ತುಳುಕುತ್ತಿದ್ದವು. ಸಾಮಾಜಿಕ ಅಂತರ ಪಾಲನೆ ಹಾಗೂ ಮಾಸ್ಕ್ ಧರಿಸಿ ಓಡಾಟ ಯಾವುದು ಅಷ್ಟಾಗಿ ಕಾಣಿಸಲೇ ಇಲ್ಲ.

ಇದ್ಯಾವ ಸೀಮೆ ಲಾಕ್​ಡೌನ್​!

ತರಕಾರಿ‌ ಮಾರ್ಕೇಟ್ ಬಳಿ ಟ್ರಾಫಿಕ್ ಜಾಮ್‌ ಉಂಟಾಗಿ ಕೆಲಹೊತ್ತು ಪರಿಸ್ಥಿತಿ ಬಿಗಡಾಯಿಸಿತ್ತು. ಬಳಿಕ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಎಂಟ್ರಿ ಕೊಟ್ಟು ಲಾಠಿ ಎತ್ತಿದ ಬಳಿಕ ಪರಿಸ್ಥಿತಿ ಹತೋಟಿಗೆ ಬಂತು. ಹೀಗಾಗಿ ಈ ಅರ್ಧ ದಿನದ ಲಾಕ್​ಡೌನ್ ಮಾಡಿರೋ ಉದ್ದೇಶವಾದ್ರೂ ಏನು ಅನ್ನೋದು ಜನ ಸಾಮಾನ್ಯರ ಪ್ರಶ್ನೆ.

ಅರ್ಧ ದಿನದ ಲಾಕ್​ಡೌನ್​ದಿಂದಾಗಿ ಮತ್ತಷ್ಟು ಕೊರೊನಾ ಹರಡುವ ಸಂಭವ ಇದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಯಾಕೆಂದರೆ, ಅರ್ಧ ದಿನ ಮಾತ್ರ ವ್ಯಾಪಾರ, ವ್ಯವಹಾರಕ್ಕೆ ಅವಕಾಶ ಇರುವುದರಿಂದ ಕೆಲವೇ ಸಮಯದಲ್ಲಿ ಜನ ಕಿಕ್ಕಿರಿದು ಸೇರುತ್ತಾರೆ. ಹೀಗಾಗಿ ಮಾರ್ಕೇಟ್​ಗೆ ಬಂದವರು ಸೋಂಕು ತಗುಲಿಸಿಕೊಂಡು ಮನೆಯವರಿಗೆ ಅದನ್ನು ಹರಡಿಸಿದಂತಾಗುತ್ತೆ. ಮಾಡಿದ್ರೆ ಪೂರ್ಣ ಲಾಕ್​ಡೌನ್ ಮಾಡಿ. ಇಲ್ಲದಿದ್ರೆ ಲಾಕ್​ಡೌನ್ ಪೂರ್ತಿ ತೆರವುಗೊಳಿಸಿ ಅಂತಿದ್ದಾರೆ ಜನ.

ABOUT THE AUTHOR

...view details