ಗಂಗಾವತಿ :ಲಾಕ್ಡೌನ್ ಘೋಷಣೆಯಾಗಿದ್ದರೂ ಕೂಡ ಅಕ್ರಮವಾಗಿ ಡ್ರಿಂಕ್ಸ್ ಮಾರಾಟ ಮಾಡಿರುವ 9 ಮಂದಿ ಮದ್ಯ ಮಾರಾಟಗಾರರ ಲೈಸೆನ್ಸ್ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಅಕ್ರಮ ಮದ್ಯ ಮಾರಾಟ.. 9 ಲೈಸೆನ್ಸ್ ಸಸ್ಪೆಂಡ್ ಮಾಡಿ ಜಿಲ್ಲಾಧಿಕಾರಿ ಆದೇಶ..
ಮಾರ್ಚ್ 23 ರಿಂದ ಏಪ್ರಿಲ್ 11ರವರೆಗೆ ಅಕ್ರಮ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಒಟ್ಟು 18 ಪ್ರಕರಣ ದಾಖಲಾಗಿದ್ದವು. ನಾಲ್ಕು ದ್ವಿಚಕ್ರ ವಾನಹಗಳನ್ನು ವಶಕ್ಕೆ ಪಡೆದಿರುವ ಅಬಕಾರಿ ಇಲಾಖೆ ಪೊಲೀಸರು ನಾಲ್ವರು ಆರೋಪಿಗಳನ್ನೂ ಬಂಧಿಸಿದ್ದಾರೆ.
ಲಾಕ್ಡೌನ್ ನಡುವೆಯೂ ಅಬಕಾರಿ ನಿಯಮಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಮದ್ಯ ಮಾರಾಟ ಮಾಡಿರುವುದು ಅಪರಾಧ. ಹಾಗಾಗಿ ಅಕ್ರಮ ಮದ್ಯ ಮಾರಾಟ ಮಾಡಿರುವ ಸನ್ನದುಗಳನ್ನು ತಪಾಸಣೆ ನಡೆಸಿ ಈ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಮಾರ್ಚ್ 23 ರಿಂದ ಏಪ್ರಿಲ್ 11ರವರೆಗೆ ಅಕ್ರಮ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಒಟ್ಟು 18 ಪ್ರಕರಣ ದಾಖಲಾಗಿದ್ದವು. ನಾಲ್ಕು ದ್ವಿಚಕ್ರ ವಾನಹಗಳನ್ನು ವಶಕ್ಕೆ ಪಡೆದಿರುವ ಅಬಕಾರಿ ಇಲಾಖೆ ಪೊಲೀಸರು ನಾಲ್ವರು ಆರೋಪಿಗಳನ್ನೂ ಬಂಧಿಸಿದ್ದಾರೆ.
ಕನಕಗಿರಿ, ಕಾರಟಗಿ, ಕುಷ್ಟಗಿ, ಕೊಪ್ಪಳ, ಯಲಬುರ್ಗಾದಲ್ಲಿ ದಾಳಿ ಮಾಡಿರುವ ಅಬಕಾರಿ ಅಧಿಕಾರಿಗಳು, 60 ಲೀಟರ್ ನಕಲಿ ಮದ್ಯ, 4.5 ಲೀಟರ್ ಕಳ್ಳಭಟ್ಟಿ, 20 ಲೀಟರ್ ಬೆಲ್ಲದ ಕೊಳೆಯನ್ನು ವಶಪಡಿಸಿಕೊಂಡಿದ್ದಾರೆ.