ಕರ್ನಾಟಕ

karnataka

ETV Bharat / state

ಅನೈತಿಕ ಸಂಬಂಧ ಆರೋಪ: ಗಂಡನ ಕೊಂದು ಹೆಣದ ಮುಂದೆಯೇ ಊಟ ಮಾಡಿದಳು ಕಿರಾತಕಿ! - ಅನೈತಿಕ ಸಂಬಂಧ ಆರೋಪ

ಮೃತ ಲಕ್ಷ್ಮಣ ಪತ್ನಿ ಲಲಿತ ಎಂಬಾಕೆ ತನ್ನ ಪ್ರಿಯಕರ ಸೋಮಪ್ಪ ಚೆನ್ನಪ್ಪ ಲಮಾಣಿ ಎಂಬಾತನ ಜೊತೆ ಸೇರಿ ಗಂಡನನ್ನೇ ಕೊಂದಿರುವ ಆರೋಪ ಪ್ರಕರಣ ಗದಗ ಜಿಲ್ಲೆಯಲ್ಲಿ ನಡೆದಿದೆ. ರಾತ್ರಿ ಮನೆಯಲ್ಲಿ ಮಲಗಿದ್ದಾಗ ಬಾಯಿಗೆ ಬಟ್ಟೆ ತುರುಕಿ, ಹಗ್ಗದಿಂದ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎನ್ನಲಾಗ್ತಿದೆ.

Illicit relationship A wife who killed her husband along with a lover
ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಂದ ಪತ್ನಿ

By

Published : Oct 2, 2020, 11:53 AM IST

Updated : Oct 2, 2020, 12:38 PM IST

ಗದಗ: ಅನೈತಿಕ ಸಂಬಂಧ ಹಿನ್ನೆಲೆ ಪ್ರಿಯಕರನ ಜೊತೆ ಸೇರಿ ಪತಿಯನ್ನ ಪತ್ನಿಯೇ ಕೊಲೆ ಮಾಡಿರುವ ಆರೋಪ ಪ್ರಕರಣ ಘಟನೆ ನಡೆದಿದೆ.

ತಾಲೂಕಿನ ಕಬಲಾಯತಕಟ್ಟಿ ತಾಂಡಾದಲ್ಲಿ ಘಟನೆ ನಡೆದಿದ್ದು, ಲಕ್ಷ್ಮಣ ಪಾಂಡಪ್ಪ ಲಮಾಣಿ (39) ಮೃತ ವ್ಯಕ್ತಿ. ಲಕ್ಷ್ಮಣನನ್ನು ಪತ್ನಿ ಲಲಿತ ಮತ್ತು ಆಕೆಯ ಪ್ರಿಯಕರ ಸೋಮಪ್ಪ ಚೆನ್ನಪ್ಪ ಲಮಾಣಿ ಸೇರಿ ಕೃತ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಲಕ್ಷ್ಮಣ ರಾತ್ರಿ ಮನೆಯಲ್ಲಿ ಮಲಗಿದ್ದಾಗ ಆತನ ಬಾಯಿಗೆ ಬಟ್ಟೆ ತುರುಕಿ ಹಗ್ಗದಿಂದ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎನ್ನಲಾಗ್ತಿದೆ. ಬಳಿಕ ಪ್ರಿಯಕರ ಸೋಮಪ್ಪ ಮನೆಯ ಹಿಂಬದಿಯಿಂದ ಕಂಪೌಂಡ್ ಹಾರಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ದಂಪತಿ ಗೋವಾದಲ್ಲಿ ಮೀನಿನ ವ್ಯಾಪಾರ ಮಾಡುತ್ತಿದ್ದರು. ಕಬಲಾಯತಕಟ್ಟಿಯ ಪಕ್ಕದ ಅತ್ತಿಕಟ್ಟಿ ತಾಂಡಾದ ನಿವಾಸಿಯಾಗಿರೋ ಸೋಮಪ್ಪ ಲಮಾಣಿ ಸಹ ಗೋವಾದಲ್ಲಿ ಮೀನಿನ ವ್ಯಾಪಾರ ಮಾಡುತ್ತಿದ್ದ. ಅಲ್ಲಿಂದಲೇ ಲಲಿತಾ ಮತ್ತು ಸೋಮಪ್ಪನ ನಡುವೆ ಅಕ್ರಮ ಸಂಬಂಧ ಬೆಳೆದಿದೆ. ಇವರಿಬ್ಬರು ಕಳೆದ ನಾಲ್ಕು ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದರು. ಆದರೆ ಇವರ ಇಬ್ಬರ ಅಕ್ರಮ ಸಂಬಂಧ ಪತಿ ಲಕ್ಷ್ಮಣನಿಗೆ ತಿಳಿದಿತ್ತು ಎನ್ನಲಾಗ್ತಿದೆ. ಈ ಸಂಬಂಧ ಇಬ್ಬರ ನಡುವೆ ಆಗಾಗ್ಗೆ ಜಗಳ ಉಂಟಾಗಿ ಅದು ಪೊಲೀಸ್ ಠಾಣೆವರೆಗೂ ಹೋಗಿ ಬಗೆಹರಿದಿತ್ತು.

ಪತಿ ಕೊಂದು ಹೆಣದ ಮುಂದೆ ಊಟ ಮಾಡಿದ ಪತ್ನಿ!

ಲಲಿತ-ಸೋಮಪ್ಪನ ಅಕ್ರಮ ಸಂಬಂಧಕ್ಕೆ ಲಕ್ಷ್ಮಣ ಅಡ್ಡಿಯಾಗಿದ್ದ. ಹೀಗಾಗಿ ಕೊಲೆ ಮಾಡಿದ್ದೇವೆ ಎಂದು ಇಬ್ಬರು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ವಿಚಿತ್ರ ಅಂದ್ರೆ ಬುಧವಾರ ರಾತ್ರಿ ಕೊಲೆ ನಡೆದಿತ್ತು. ಗುರುವಾರ ಬೆಳಗ್ಗೆ 10 ಗಂಟೆಯಾದರೂ ಗಂಡನ ಸಾವಿನ ಬಗ್ಗೆ ನೆರೆಹೊರೆಯವರಿಗೆ ತಿಳಿಸದೆ ಬೆಳಗ್ಗೆ ಮನೆ ಕೆಲಸ ಮಾಡಿದ್ದಳು. ಅಲ್ಲದೆ, ಹೆಣದ ಮುಂದೆಯೇ ಊಟ ಮಾಡಿದ್ದಾಳೆ. ಆದರೆ 10 ಗಂಟೆ ಬಳಿಕ ಗಂಡ ಯಾಕೋ ಎದ್ದೇಳುತ್ತಿಲ್ಲಾ ಎಂದು ಜನರಿಗೆ ತಿಳಿಸಿದ್ದಾಳೆ. ಬಳಿಕ ಮಲಗಿದ್ದಲ್ಲಿಯೇ ಸಾವನ್ನಪ್ಪಿದ್ದಾನೆ ಅಂತ ಕಥೆ ಕಟ್ಟಿದ್ದಾಳೆ.

ಆದರೆ ಬಳಿಕ ಗುರುವಾರ ಮಧ್ಯಾಹ್ನನ ಹೊತ್ತಿಗೆ ಮೃತದೇಹವನ್ನು ಜಳಕ ಮಾಡಿಸುವಾಗ ಕುತ್ತಿಗೆ ಹತ್ತಿರ ಗುರುತು ಬಿದ್ದಿರೋದನ್ನ ನೋಡಿದ ಗ್ರಾಮಸ್ಥರಿಗೆ ಆತನ ಹೆಂಡತಿ ಮೇಲೆ ಅನುಮಾನ ಬಂದಿದೆ. ಬಳಿಕ ಮೃತನ ಮಗ ಮತ್ತು ಸಂಬಂಧಿಕರಿಗೆ ವಿಷಯ ತಿಳಿಸಿದಾಗ ಸತ್ಯ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಬಂದ ಮುಳುಗುಂದ ಠಾಣಾ ಪೊಲೀಸರು ಇಬ್ಬರನ್ನ ವಿಚಾರಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾರೆ ಎನ್ನಲಾಗ್ತಿದೆ.

ಸದ್ಯ ಮುಳುಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಲಲಿತ ಮತ್ತು ಆಕೆಯ ಪ್ರಿಯಕರ ಸೋಮಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.

Last Updated : Oct 2, 2020, 12:38 PM IST

ABOUT THE AUTHOR

...view details