ಕರ್ನಾಟಕ

karnataka

ETV Bharat / state

ಡಿಕೆಶಿ ನಿರಪರಾಧಿಯಾಗಿದ್ರೆ ಹೊರಗೆ ಬರ್ತಾರೆ: ಸಚಿವ ಸಿ. ಸಿ. ಪಾಟೀಲ್ - ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ

ಮಾಜಿ ಸಚಿವ ಡಿ.ಕೆ ಶಿವಕುಮಾರ್ ನಿರಪರಾಧಿಯಾಗಿದ್ದರೆ ಹೊರಗೆ ಬರುತ್ತಾರೆ. ರಾಜಕೀಯ ವಿರೋಧಿಗಳಿಗೆ ಪಿಎಂ ಮೋದಿ ಸಮಯ ಮೀಸಲು ಇಡುವುದಿಲ್ಲ ಎಂದು ಸಚಿವ ಸಿಸಿ ಪಾಟೀಲ್​ ಕಾಂಗ್ರೆಸ್​​ಗೆ ಪರೋಕ್ಷ ಟಾಂಗ್​ ಕೊಟ್ಟಿದ್ದಾರೆ.

ಡಿಕೆಶಿ ನಿರಪರಾಧಿಯಾಗಿದ್ರೆ ಹೊರಗೆ ಬರ್ತಾರೆ: ಸಚಿವ ಸಿ ಸಿ ಪಾಟೀಲ್ ಪ್ರತಿಕ್ರಿಯೆ

By

Published : Aug 31, 2019, 11:50 AM IST

ಗದಗ: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಇಡಿ ಇಲಾಖೆ ತೀವ್ರ ವಿಚಾರಣೆ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.

ಡಿಕೆಶಿ ನಿರಪರಾಧಿಯಾಗಿದ್ರೆ ಹೊರಗೆ ಬರ್ತಾರೆ: ಸಚಿವ ಸಿ ಸಿ ಪಾಟೀಲ್ ಪ್ರತಿಕ್ರಿಯೆ

ಜಿಲ್ಲೆಯ ನರಗುಂದದಲ್ಲಿ ಮಾತನಾಡಿದ ಅವರು, ಕಾನೂನು ತನ್ನ ಕೆಲಸ ಮಾಡುತ್ತದೆ. ಡಿ.ಕೆ ಶಿವಕುಮಾರ್ ನಿರಪರಾಧಿಯಾಗಿದ್ರೆ ಹೊರಗೆ ಬರುತ್ತಾರೆ ಎಂದರು. ಇದೇ ವೇಳೆ, ಕೇಂದ್ರ ಸರ್ಕಾರ ಐಟಿ, ಇಡಿ ಇಲಾಖೆ ದುರುಪಯೋಗ ಮಾಡುಕೊಳ್ತಿದೆ ಎನ್ನೋ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ ಅವರು, ನಮಗಿಂತ ಹೆಚ್ಚು ರಾಜ್ಯ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತ ನಡೆಸಿದೆ. ತಮ್ಮ ಅನುಭವವನ್ನು ನಮ್ಮ ಮೇಲೆ ಹಾಕೋದಕ್ಕೆ ಪ್ರಯತ್ನ ಪಡುತ್ತಿದ್ದಾರೆ ಎಂದರು.

ಪ್ರಧಾನಿ ಮೋದಿ ದೇಶದ ಜನರ ಸಲುವಾಗಿ ತಮ್ಮ ಸಮಯವನ್ನು ಮೀಸಲಿಟ್ಟಿದ್ದಾರೆಯೇ, ಹೊರತು ರಾಜಕೀಯ ವಿರೋಧಿಗಳಿಗಾಗಿಯಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ABOUT THE AUTHOR

...view details