ಗದಗ :ಹುಬ್ಬಳ್ಳಿಯ ಮೂರು ಸಾವಿರ ಮಠದ ಉತ್ತರಾಧಿಕಾರಿ ನೇಮಕ ವಿವಾದ ವಿಚಾರವಾಗಿ ಯಥಾಸ್ಥಿತಿ ಕಾಯ್ದುಕೊಳ್ಳಲು ನ್ಯಾಯಾಲಯದ ನಿರ್ದೇಶನಕ್ಕೆ ದಿಂಗಾಲೇಶ್ವರ ಸ್ವಾಮೀಜಿಗಳು ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋರ್ಟ್ ನಿರ್ದೇಶನದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಯಥಾಸ್ಥಿತಿ ಕಾಯ್ದುಕೊಳ್ಳಬೇಕೆಂಬ ಕೋರ್ಟ್ನ ನಿರ್ದೇಶನದ ಬಗ್ಗೆ ನಾನು ಗಮನಿಸಿಲ್ಲ.
ಯಾರಿಂದನೂ ನಾನು ಕೇಳಿಲ್ಲ. ಈ ಬಗ್ಗೆ ಕೋರ್ಟ್ ಸಹ ನನಗೆ ಯಾವುದೇ ಮಾಹಿತಿ ತಿಳಿಸಿಲ್ಲ. ಹಾಗಾಗಿ, ಕೋರ್ಟ್ ವಿಚಾರವನ್ನು ಜಗದ್ಗುರುಗಳಿಗೆ ಬಿಟ್ಟು ಬಿಡ್ತೇನೆ ಎಂದರು.
ಮಠದ ಆಸ್ತಿ ಮರಳಿ ಬರುವವರೆಗೆ ನಾ ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ.. ಇನ್ನು, ಅದರಲ್ಲಿ ಯಾವುದೇ ಹಸ್ತಕ್ಷೇಪ ಮಾಡೋದಿಲ್ಲ. ನನ್ನ ಹೋರಾಟ ಮಠದ ಆಸ್ತಿ ಉಳಿಸೋಕೆ ಇರೋದು. ಮಠದ ಆಸ್ತಿ ನಾಶವಾಗಿದೆ. ಅದರ ಅಳಿವು ಉಳಿವಿನ ಪ್ರಶ್ನೆ ಇದೆ. ಹೀಗಾಗಿ, ಮಠದ ಆಸ್ತಿಯನ್ನ ಉಳಿಸಬೇಕು ಎಂದು ನಾನು ಹೋರಾಟ ಮುಂದುವರೆಸಿದ್ದೇನೆ.
ಅಲ್ಲದೆ, ಮಠದ ಆಸ್ತಿ ಮರಳಿ ಬರುವವರೆಗೆ ನಾ ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ. ಕೋರ್ಟ್ ನಿರ್ದೇಶನದಿಂದ ನನಗೇನೂ ಯಾವುದೇ ಹಿನ್ನಡೆ ಆಗಿಲ್ಲ. ಅಕಸ್ಮಾತ್ ಹಿನ್ನಡೆಯಾಗುವಂತಹ ಕೆಲಸಕ್ಕೆ ನಾನೂ ಕೈ ಹಾಕುವುದಿಲ್ಲ ಎಂದು ದಿಂಗಾಲೇಶ್ವರ ಸ್ವಾಮೀಜಿಗಳು ತಿಳಿಸಿದಿದರು.