ಕರ್ನಾಟಕ

karnataka

ETV Bharat / state

ಮಾವನ ಮನೆಗೆ ಬಂದಿದ್ದ ಅಳಿಯನಿಂದ ಮಗಳ ಮೇಲೆ ಹಲ್ಲೆ: ಪತ್ನಿ, ಕಂದಮ್ಮನಿಗೆ ಚಾಕು ಇರಿತ - ಗದಗದಲ್ಲಿ ಚಾಕು ಇರಿತ ಪ್ರಕರಣ

ಪತ್ನಿ ಬಗ್ಗೆ ಸಂಶಯ ಹೊಂದಿದ್ದ ಪತಿ ಚಾಕುವಿನಿಂದ ಮಡದಿ ಮತ್ತು ಮಗುವಿಗೆ ಇರಿದ ಘಟನೆ ಗದಗದಲ್ಲಿ ನಡೆದಿದೆ. ಚಾಕುವಿನಿಂದ ಹಲ್ಲೆ ಮಾಡಿದ ಪತಿಯನ್ನು ಗ್ರಾಮಸ್ಥರು ಮರಕ್ಕೆ ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ.

husband-attacked-with-a-knife-on-wife-in-gadaga
ಸಂಶಯದ ಆಸಾಮಿಯಿಂದ ಪತ್ನಿ, ಕಂದಮ್ಮನಿಗೆ ಚಾಕು ಇರಿತ

By

Published : Nov 18, 2022, 9:26 PM IST

ಗದಗ: ಕೌಟುಂಬಿಕ ಕಲಹ ಹಿನ್ನೆಲೆ ಹೆಂಡತಿ, ಆರು ವರ್ಷದ ಮಗನಿಗೆ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡೋಣಿ ತಾಂಡಾದಲ್ಲಿ ನಡೆದಿದೆ. ಮಧ್ಯರಾತ್ರಿ ಗೋವಾದಿಂದ ಮಾವನ ಮನೆಗೆ ಬಂದಿದ್ದ ಅಳಿಯ ಹೆಂಡತಿ ಮತ್ತು ಮಗುವಿಗೆ ಚಾಕುವಿನಿಂದ ಇರಿದು ರಾಕ್ಷಸಿಕೃತ್ಯ ಎಸಗಿದ್ದಾನೆ.

ಗಾಯಾಳು ತಾಯಿ, ಮಗುವನ್ನು ಗದಗ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದೆ. ಚಾಕು ಇರಿದ ಮುರಳಿ ಪೂಜಾರ್ (32) ಎಂಬಾತನನ್ನು ಗ್ರಾಮಸ್ಥರು ಮರಕ್ಕೆ ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ‌. ಗೋವಾದಲ್ಲಿ ಕೆಲಸ ಮಾಡುತ್ತಿದ್ದ ಮುರಳಿ ಪತ್ನಿಯೊಂದಿಗೆ ಕಿರಿಕ್ ಮಾಡ್ಕೊಂಡಿದ್ದ. ಹೀಗಾಗಿ ಪತಿಯನ್ನು ಬಿಟ್ಟು ಮಗುವಿನೊಂದಿಗೆ ಡೋಣಿ ತಾಂಡಾದಲ್ಲಿನ ತವರು ಮನೆಗೆ ಸಕ್ಕುಬಾಯಿ ಬಂದಿದ್ದರು.

ಮಾವನ ಮನೆಗೆ ಬಂದಿದ್ದ ಅಳಿಯನಿಂದ ಮಗಳ ಮೇಲೆ ಹಲ್ಲೆ

ರಾಜಿಪಂಚಾಯ್ತಿಯಲ್ಲಿ ಮುರಳಿ ಹಾಗೂ ಸಕ್ಕುಬಾಯಿ ಅವರನ್ನು ಒಂದು ಮಾಡೋದಕ್ಕೆ ಹಿರಿಯರು ಮುಂದಾಗಿದ್ದರು. ನಿನ್ನೆಯಷ್ಟೆ ಹಿರಿಯರು ಸೇರಿ ಮಾತುಕಥೆ ನಡೆಸಿದ್ದರು. ಬೆಳಗ್ಗೆ ಅಳಿಯನೊಂದಿಗೆ ಗೋವಾಕ್ಕೆ ಕಳಿಸುವುದಕ್ಕೆ ನಿರ್ಧಾರವನ್ನೂ ಮಾಡಲಾಗಿತ್ತು. ಆದರೆ ಏಕಾ ಏಕಿ ಮಧ್ಯರಾತ್ರಿ ಮುರಳಿ ಸಕ್ಕುಬಾಯಿ, ಶಿವಂ ಮೇಲೆ ಹಲ್ಲೆ ಮಾಡಿದ್ದಾರೆ. ಸದ್ಯ ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಚಾಕು ಇರಿದ ಮುರಳಿಯನ್ನ ಕೂಡಿಹಾಕಿದ್ದ ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ಸಂಬಂಧ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಶ್ರದ್ಧಾ ಶವದ ಪಕ್ಕ ಕುಳಿತು ಗಾಂಜಾ ಸೇದಿದ್ದ ಅಫ್ತಾಬ್: ಮತ್ತೊಂದು ಬ್ಯಾಗ್​ ಪತ್ತೆ, ಸ್ನೇಹಿತರ ಚಾಟಿಂಗ್​ ಪರಿಶೀಲನೆ

ABOUT THE AUTHOR

...view details